

ಚಿಕ್ಕಮಗಳೂರು: ದತ್ತಪೀಠದಲ್ಲಿ ಮುಸ್ಲಿಮರಿಗೆ ಉರುಸ್ ಮಾಡಲು, ನಮಾಜ್ ಮಾಡಲು ಅವಕಾಶ ನೀಡಿದರೆ ಅದು ಸೌಹಾರ್ದವಾಗುವುದಿಲ್ಲ. ಬದಲಿಗೆ ಸಂಘರ್ಷವಾಗುತ್ತದೆ. ಇದರ ಬದಲಾಗಿ ಮುಸ್ಲಿಮರ ಮಸೀದಿ ಹಾಗೂ ಕ್ರಿಶ್ಚಿಯನ್ನರ ಚರ್ಚ್ಗಳಲ್ಲಿ ಪೂಜೆ, ಪುನಸ್ಕಾರ, ಹೋಮ, ಹವನ ಮಾಡಲು ಅವಕಾಶ ನೀಡಿದರೆ ಸೌಹಾರ್ಧಕ್ಕೆ ಅರ್ಥ ಬರುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟಿçÃಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ತಾಲೂಕಿನ ದತ್ತಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಹಿಂದುಗಳ ಮೇಲೆ ಸೌಹಾರ್ದದ ಕೈ ಇಡುವ ಪ್ರಕ್ರಿಯೆ ಇನ್ನು ಮುಂದೆ ನಡೆಯುವುದಿಲ್ಲ. ಪ್ರತಿವಾರ ದತ್ತಪೀಠದಲ್ಲಿ ನಡೆಯುವ ನಮಾಜನ್ನು ನಾಗೇನಹಳ್ಳಿಯಲ್ಲಿರುವ ದರ್ಗಾಕ್ಕೆ ಶಿಫ್ಟ್ ಮಾಡಬೇಕು ಎಂದು ಆಗ್ರಹಿಸಿದರು.
ದತ್ತಪೀಠದಲ್ಲಿ ತುಳಸಿ ಕಟ್ಟೆ, ಹೋಮಕುಂಡ, ಧ್ವಜಸ್ತಂಬ ಹೀಗೆ ಅನೇಕ ಕುರುಹುಗಳಿದ್ದವು. ಆದರೆ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ನೀತಿಯಿಂದಾಗಿ ಇಲ್ಲಿನ ಮುಸ್ಲಿಮರು ಹಿಂದೂ ಕುರುಹುಗಳನ್ನು ನಾಶ ಮಾಡಿರುವುದು ಸತ್ಯ. ಇದಲ್ಲದೆ ದತ್ತಪೀಠ ಭಾಗದಲ್ಲಿ ಮಸೀದಿ ಕಟ್ಟಿ, ಮೈಕ್ ಹಾಕಿ, ಗೋಮಾಂಸ ಭಕ್ಷಣೆ ಮಾಡುತ್ತಿದ್ದರು. ಹೋರಾಟದ ಮೂಲಕವೇ ಈ ಎಲ್ಲವನ್ನು ನಿಲ್ಲಿಸಿz್ದೆÃವೆ. ಮುಸ್ಲಿಮರ ಮೂಲ ಮಾನಸಿಕತೆಯೇ ಅತಿಕ್ರಮಣ. ದೇಶದ ಎಲ್ಲೆಡೆಯೂ ಹಿಂದುಗಳ ಧಾರ್ಮಿಕ ಕ್ಷೇತ್ರಗಳನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶ ಹಾಗೂ ರಾಜ್ಯದಲ್ಲಿ ಹಿಂದುಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ. ಹೀಗಾಗಿ ಹಿಂದೂ ಮತ್ತು ಹಿಂದುತ್ವ ಅಪಾಯದಲ್ಲಿದೆ. ಹಿಂದೂಗಳ ಮೇಲೆ ಆಕ್ರಮಣದ ಜೊತೆಗೆ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಹಿಂದುಗಳ ಜೊತೆ ಹಿಂದೂ ಸಂಘಟನೆಗಳು ಒಟ್ಟಾಗಬೇಕು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಕರೆ ನೀಡಿದ್ದರಿಂದಾಗಿ ಹಿಂದೂ ಸಂಘಟನೆಗಳೆಲ್ಲ ಒಂದಾಗಿz್ದÉÃವೆ ಎಂದು ಹೇಳಿದರು.
ದತ್ತಪೀಠ ಹೋರಾಟ ರಾಜ್ಯದ ಹಿಂದುಗಳಿಗೆ ಶಕ್ತಿ ನೀಡಿದೆ. ರಾಜ್ಯದ ಎಲ್ಲೆಡೆಯೂ ಮುಸ್ಲಿಮರು ಅತಿಕ್ರಮಣ, ಆಕ್ರಮಣ ಮಾಡುತ್ತಿದ್ದರು. ಎಲ್ಲಿ ಬೇಕೋ ಅಲ್ಲಿ ಮಸೀದಿ, ಗೋರಿ, ಖಬರಸ್ಥಾನ ಮಾಡುತ್ತಿದ್ದರು. ಇಂಥ ಅತಿಕ್ರಮಣಕಾರಿ ಪ್ರವೃತ್ತಿಗೆ ತಡೆ ನೀಡಿz್ದÉÃ ದತ್ತಪೀಠದ ಹೋರಾಟ. ಇಲ್ಲಿಗೆ ಬಂದು ಪ್ರೇರಣೆ ಪಡೆದ ಯುವಕರು ತಮ್ಮ ಹಳ್ಳಿ ಹಾಗೂ ಊರುಗಳಲ್ಲಿ ನಡೆಯುತ್ತಿದ್ದ ಅತಿಕ್ರಮಣ ತಡೆದಿದ್ದಾರೆ ಎಂದು ಹೇಳಿದರು.