

ಅಂಕೋಲಾ: ಅಜ್ಜಿಕಟ್ಟಾ ವಾರ್ಡ್ನ ಕಾರವಾರ-ಅಂಕೋಲಾ ಮುಖ್ಯ ರಸ್ತೆ ಅಂಚಿಗೆ ಅಕ್ರಮವಾಗಿ ನಿರ್ವಣಗೊಳ್ಳುತ್ತಿರುವ ಮಸೀದಿ ಕಟ್ಟಡ ಮತ್ತು ಧ್ವನಿವರ್ಧಕ ಅಳವಡಿಸಿರುವುದನ್ನು ವಿರೋಧಿಸಿ ಸ್ಥಳೀಯರು ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಪ್ರಮುಖರಾದ ಜಯೇಶ ಜಿ. ನಾಯ್ಕ ಮಾತನಾಡಿ, ಅಜ್ಜಿಕಟ್ಟಾ ವಾರ್ಡ್ನ ಸರ್ವೆ ನಂ. 70 ಅ/ಬಿ ಕ್ಷೇತ್ರದಲ್ಲಿ ಮಸೀದಿ ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಅಳವಡಿಸಿರುವ ಧ್ವನಿವರ್ಧಕ ಬಗೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಲಾಗಿದೆ. ಈ ಕುರಿತು ಪೊಲೀಸರಿಗೂ ಮನವಿ ಸಲ್ಲಿಸಿದ್ದೇವೆ. ಕೂಡಲೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ವಿಷ್ಣು ಎನ್. ನಾಯ್ಕ, ಓನಮ ಎಸ್. ಶೆಟ್ಟಿ, ವೀಣಾ ಆರ್. ನಾಯ್ಕ, ಪ್ರಭಾ ನಾಯ್ಕ, ಮದನ ವಿ.ಶೆಟ್ಟಿ, ಇದ್ದರು.