ಮಸಳಿಕಟ್ಟಿಯಲ್ಲಿ ಗಂಡಾನೆ ಸಾವು

16-KLG-3
Published on

ಕಲಘಟಗಿ: ತಾಲೂಕಿನ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಆನೆಯೊಂದು ಮೃತಪಟ್ಟ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಸೊಂಡಿಲು ಬಳಿ ಗಾಯಗೊಂಡಿದ್ದ ಆನೆಯು ಮುಂಡಗೋಡ ತಾಲೂಕಿನ ಅತ್ತಿವೇರಿ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಳಿಕಟ್ಟಿಯ ಅರಣ್ಯಕ್ಕೆ ಬಂದಿತ್ತು. ಗಾಯಗೊಂಡಿದ್ದ ಆನೆಗೆ ಆಹಾರ ಸೇವಿಸಲು ಸಾಧ್ಯವಾಗದೆ ಇರುವುದನ್ನು ಗಮನಿಸಿದ್ದ ಅರಣ್ಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಗುರುವಾರ ತಜ್ಞ ವೈದ್ಯರ ತಂಡ ಬರಬೇಕಿತ್ತು. ಅಷ್ಟರಲ್ಲಾಗಲೇ ನಾಲ್ಕೈದು ವರ್ಷದ ಗಂಡಾನೆ ಮೃತಪಟ್ಟಿದೆ ಎಂದು ವಲಯ ಅರಣ್ಯ ಅಧಿಕಾರಿ ಸಂತೋಷಕುಮಾರ ಎಸ್. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net