

ಸಾಗರ: ತಾಲೂಕಿನಾದ್ಯಂತ ನಿರಂತರ ಮಳೆ ಸುರಿದ ಪರಿಣಾಮ ಸಾಕಷ್ಟು ಮನೆಗಳು ಮತ್ತು ಕೊಟ್ಟಿಗೆಗಳು ಹಾನಿಗೀಡಾಗಿವೆ. ಕಳೆದ ಎರಡು ದಿನಗಳಲ್ಲಿ ಮಡಸೂರಿನ ರಾಮಚಂದ್ರ ಎಂಬುವವರ ಕೊಟ್ಟಿಗೆ, ಲಕ್ಕವಳ್ಳಿಯ ಗಂಗಮ್ಮ ಎಂಬುವರ ಮನೆ ಕುಸಿದಿದೆ. ಲಿಂಗದಹಳ್ಳಿಯ ವಿನಯ್ ಎಂಬುವವರ ಅಡಕೆ ತೋಟದ ಬದಿಯಲ್ಲಿದ್ದ ಮಾವಿನ ಮರ ಮಣ್ಣಿನ ಸವಕಳಿಯಿಂದ ಬಿದ್ದಿದ್ದರಿಂದ 80ಕ್ಕೂ ಹೆಚ್ಚು ಅಡಕೆ ಮರಗಳು ನೆಲಕಚ್ಚಿವೆ.
ಮಳೆಹಾನಿಗೆ ಸಂಬಂಸಿ ಸೋಮವಾರ ಮಾಹಿತಿ ನೀಡಿದ ತಹಸೀಲ್ದಾರ್ ಎಚ್.ಜೆ.ರಶ್ಮಿ, ಕಳೆದ ಏಪ್ರಿಲ್, ಮೇ ತಿಂಗಳಿನಲ್ಲಿ ಬಿದ್ದ 20 ಮನೆಗಳಿಗೆ 6,72,500 ರೂ. ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜೂನ್‌ನಿಂದ ಆಗಸ್ಟ್‌ವರೆಗೆ 49 ಮನೆಗಳು ಹಾನಿಯಾಗಿದ್ದು, ಇವುಗಳಲ್ಲಿ 20 ಮನೆಗಳಿಗೆ 9,96,500 ರೂ. ಪರಿಹಾರ ಅಂದಾಜು ಮಾಡಲಾಗಿದೆ. ಶೀಘ್ರವೇ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ. ಉಳಿದ ಮನೆಗಳ ಪರಿಹಾರಕ್ಕೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಮೂರು ಜಾನುವಾರುಗಳು ಮೃತಪಟ್ಟಿದ್ದು, ಮಾಲೀಕರಿಗೆ 90 ಸಾವಿರ ರೂ. ಪರಿಹಾರ ನೀಡಲಾಗಿದೆ. 18 ಕೊಟ್ಟಿಗೆಗಳು ನಾಶವಾಗಿದ್ದು, 54 ಸಾವಿರ ರೂ. ಪರಿಹಾರ ನೀಡಲಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖೆಯಿಂದ ಕೂಡಲೇ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ನಷ್ಟಕ್ಕೆ ಸಂಬಂಸಿ ಸಂಬಂಸಿದ ಇಲಾಖೆಯಿಂದ ಮಾಹಿತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆ ಜಂಟಿ ಸರ್ವೇ ನಡೆಸಿ, ಪರಿಹಾರಕ್ಕೆ ಸಂಬಂಸಿ ಸರ್ಕಾರದ ಸೂಚನೆಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಡಕೆ ಬೆಳೆ ಬಾಸುತ್ತಿದೆ ರೋಗ
ಸಾಗರ ತಾಲೂಕಿನಲ್ಲಿ ವ್ಯಾಪಕ ಮಳೆಯಿಂದ ಅಡಕೆಗೆ ಎಲೆಚುಕ್ಕೆ ಮತ್ತು ಕೊಳೆರೋಗ ಬಾಸುತ್ತಿದೆ. ಕರೂರು ಮತ್ತು ಬಾರಂಗಿ ಹೋಬಳಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಈಗಾಗಲೇ ತೋಟಗಾರಿಕೆ ಇಲಾಖೆ ಅಕಾರಿಗಳು ಬಾತ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಕೊಳೆರೋಗಕ್ಕೆ ಮೂರು ಬಾರಿ ಔಷಧ ಸಿಂಪಡಿಸಲಾಗಿದೆ. ನಾಲ್ಕನೇ ಸುತ್ತಿನ ಸಿಂಪಡಣೆ ಆರಂಭವಾಗಿದೆ. ಹೆಗ್ಗೋಡು, ಭೀಮನಕೋಣೆ ಸುತ್ತಮುತ್ತ ಕೂಡ ಕೊಳೆರೋಗ ಕಾಣಿಸಿಕೊಂಡಿದೆ. 5,200 ಹೆಕ್ಟೇರ್ ಪ್ರದೇಶದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. 8,400 ಹೆಕ್ಟೇರ್‌ನಲ್ಲಿ ಎಲೆಚುಕ್ಕೆ ರೋಗ ಬಾಸಿದೆ. ಕೆಲವು ತೋಟಗಳಲ್ಲಿ ಎರಡೂ ರೀತಿಯ ರೋಗಗಳು ಕಾಣಿಸಿಕೊಂಡಿವೆ. ಈ ಕುರಿತು ಬೆಳೆಗಾರರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ತೋಟಗಳಿಗೆ ಔಷಧ ಸಿಂಪಡಣೆಗೆ ಔಷಧಗಳನ್ನು ಸಬ್ಸಿಡಿ ದರದಲ್ಲಿ ಬೆಳೆಗಾರರಿಗೆ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹಾಬಲೇಶ್ವರ್ ಮಾಹಿತಿ ನೀಡಿದ್ದಾರೆ.