

ಹಾಸನ: ತಾಲೂಕಿನಲ್ಲಿ ಅತಿ ಮಳೆಯಿಂದ ಮನೆ ಹಾಗೂ ಅಪಾರ ಆಸ್ತಿ ನಾಶವಾದ ಪ್ರದೇಶಗಳಿಗೆ ಹಾಸನದ ಲಯನ್ಸ್ ಕ್ಲಬ್ ವತಿಯಿಂದ ಭೇಟಿ ನೀಡಿ ಅವಶ್ಯಕವಾಗಿ ಬೇಕಾಗಿರುವ ಆಹಾರ ಧಾನ್ಯಗಳು ಹಾಗೂ ಟಾರ್ಪಲ್ ಗಳನ್ನ ಅನೇಕರಿಗೆ ವಿತರಿಸಿದರು.
ಕಳೆದ ಒಂದುವರೆ ತಿಂಗಳಿನಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಜನ ಜೀವನವೇ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ಹಾಗೂ ಹೆಂಚಿನ ಮನೆಗಳಿಗೆ ಬಾರಿ ನಷ್ಟವಾಗಿದೆ. ಅನೇಕ ಮನೆಗಳು ಕುಸಿದು ಜನರು ಬೀದಿ ಪಾಲಾಗಿದ್ದಾರೆ. ಅಂತವರನ್ನು ಗುರುತಿಸಿ ಕೈಲಾದ ಸಹಾಯವನ್ನು ಹಾಸನ ಲಯನ್ಸ್ ಕ್ಲಬ್ ಮಾಡುತ್ತಿದ್ದು, ಸುಮಾರ್ 50 ಜನರು ಇದರೆ ಸದುಪಯೋಗ ಮತ್ತು ಸೌಲಭ್ಯ ಪಡೆದುಕೊಂಡರು,
ಇದೆ ವೇಳೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಐ.ಜಿ. ರಮೇಶ್, ಕಾರ್ಯದರ್ಶಿ ರವಿಕುಮಾರ್ ಬಲ್ಲೇನಹಳ್ಳಿ, ಖಜಾಂಚಿ ಸಿ.ಬಿ. ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.