ಮಳೆಯಿಂದ ಪರದಾಡಿದ ಗಣತಿದಾರರು

27-ANP-P1 RAIN
ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ಶನಿವಾರ ಆಗಮಿಸಿದ ಮಳೆಯಿಂದ ರಸ್ತೆಯಲ್ಲಿ ನೀರು ಹರಿಯುತ್ತಿರುವುದು.
Published on

ಆನಂದಪುರ: ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದ್ದು, ಸಮೀಕ್ಷೆಗೆ ನಿಯೋಜಿತರಾಗಿದ್ದ ಶಿಕ್ಷಕರು ಛತ್ರಿ, ರೈನ್ ಕೋಟ್ ಇಲ್ಲದೆ ಕೆಲಸಕ್ಕೆ ತೆರಳಿದ್ದರಿಂದ ಸಮಸ್ಯೆ ಎದುರಿಸಿದರು. ಅಕ ಪ್ರಮಾಣದ ಮಳೆ ಕಾರಣದಿಂದ ಗಣತಿ ನಮೂನೆ, ಗಣತಿ ಕಿಟ್ ಮತ್ತು ಮೊಬೈಲ್ ನೀರಿನಲ್ಲಿ ಒದ್ದೆಯಾಗದಂತೆ ರಕ್ಷಿಸಿಕೊಳ್ಳಲು ಪರದಾಡಿದರು. ಗ್ರಾಮೀಣ ಪ್ರದೇಶದಲ್ಲಿ ಮನೆಗಳು ದೂರ ದೂರ ಇರುವ ಕಾರಣ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಲು ಮಳೆ ಅಡ್ಡಿಯಾಗಿತ್ತು. ಸ್ಥಳೀಯರ ನೆರವು ಪಡೆದು ಮುಂದಿನ ಮನೆಗಳಿಗೆ ಹೆಜ್ಜೆ ಹಾಕುವ ಸ್ಥಿತಿ ಕಂಡುಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net