

ಅರಕಲಗೂಡು: ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಶಿಥಿಲಗೊಂಡಿದ್ದ ತಾಲೂಕಿನ ಯಲಗತವಳ್ಳಿ ಗ್ರಾಮದ ಮನೆಯೊಂದರ ಗೋಡೆ ಗುರುವಾರ ಕುಸಿದಿದ್ದು, ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಗ್ರಾಮದ ರಾಜಯ್ಯ ಎಂಬುವವರ ಮನೆ ಕುಸಿದು ಬಿದ್ದು ಹಾನಿಗೀಡಾಗಿದೆ. ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ರಾಜಯ್ಯ ಅವರ ಮನೆಯ ಗೋಡೆ ಶಿಥಿಲವಾಗಿತ್ತು. ಗೋಡೆ ಕುಸಿದು ಬಿದ್ದ ವೇಳೆ ಮನೆಯಿಂದ ಹೊರಗೆ ಇದ್ದುದ್ದರಿಂದ ಅದೃಷ್ಟವಶಾತ್ ಗಂಡ, ಹೆಂಡತಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಯ್ಯ ಎಂಬುವವರು ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ವಾಸದ ಮನೆ ಗೋಡೆ ಕುಸಿದಿರುವುದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಮನೆಯ ಗೋಡೆ ಬಿದ್ದು ಕುಟುಂಬಸ್ಥರು ಅತಂತ್ರರಾಗಿದ್ದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಆಗಲಿ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರಾಜಯ್ಯ ಮನವಿ ಮಾಡಿದರು.
23ಎಆರ್‌ಕೆ3..
ಅರಕಲಗೂಡು ತಾಲೂಕಿನ ಯಲಗತವಳ್ಳಿ ಗ್ರಾಮದಲ್ಲಿ ರಾಜಯ್ಯ ಎಂಬುವವರ ವಾಸದ ಮನೆಯ ಗೋಡೆ ಕುಸಿದು ಹಾನಿಗೀಡಾಗಿದೆ.