ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಪಲಾನುಭಾವಿಗಳಿಗೆ ಸಬ್ಸಿಡಿ ಹಣ ನೀಡಿಲ್ಲ ಪ್ರತಿಭಟನೆ

ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಪಲಾನುಭಾವಿಗಳಿಗೆ ಸಬ್ಸಿಡಿ ಹಣ ನೀಡಿಲ್ಲ ಪ್ರತಿಭಟನೆ
Published on

ಬೇಲೂರು: ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಪಲಾನುಭಾವಿಗಳಿಗೆ ನೀಡ ಬೇಕಾದ ಸಬ್ಸಿಡಿ ಹಣ ನೀಡಿಲ್ಲ ಎಂದು ಆರೋಪಿಸಿ ರೈತ ಸಂಘದ ತಾಲೂಕು ಪದಾಧಿಕಾರಿಗಳು ಕೃಷಿ ಇಲಾಖೆ ಮುಂದೆ ಸೋಮವಾರ ರಾತ್ರಿ ಪ್ರತಿಟನೆ ನಡೆಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ತಾಲೂಕಿನ ಮುತ್ತುಗನ್ನೆ ಗ್ರಾಮದಲ್ಲಿ ಹಸು, ಕುರಿ ಕೊಳ್ಳಲು ಹಾಗೂ ಎರೆ ಹುಳು ಘಟಕ ಸ್ಥಾಪನೆ, ಜೇನು ಸಾಕಣೆ ಪೆಟ್ಟಿಗೆ ನಿರ್ಮಿಸಲು 38 ಜನ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಪರಿಶಿಷ್ಟ ವರ್ಗದ 6 ಪಲಾನುಭವಿಗಳಿಗೆ ಸಬ್ಸಿಡಿ ನೀಡಲಾಗಿದೆ, ಸಾಮಾನ್ಯ ವರ್ಗದ 32 ಜನರಿಗೆ ಸಬ್ಸಿಡಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಈ ವಿಚಾರವಾಗಿ ರೈತರು ಕಚೇರಿಗೆ ಅಲೆದು ಅಲೆದು ಹೈರಣಾಗಿದ್ದಾರೆ. ಸೋಮವಾರ ಕಚೇರಿಗೆ ಬಂದರೆ ಸಹಾಯಕ ಕೃಷಿ ಅಧಿಕಾರಿ ಕಚೇರಿಯಲ್ಲಿ ಇರಲಿಲ್ಲ, ಅವರು ಬಂದು ಉತ್ತರ ಕೊಡದೆ ಹೋದರೆ ಇಲ್ಲೇ ರಾತ್ರಿ ಪೂರ್ತಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದರು.

ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಕಾವ್ಯ ಮಾತನಾಡಿ, ಪರಿಶಿಷ್ಟ ವರ್ಗದವರಿಗೆ ಅನುದಾನ ಬಂದಿದ್ದರಿಂದ ಅವರಿಗೆ ಸಬ್ಸಿಡಿ ಹಣ ನೀಡಲಾಗಿದೆ, ಸಾಮಾನ್ಯ ವರ್ಗಕ್ಕೆ ಈಗ ಅನುದಾನ ಬಂದಿದ್ದು, ಅದನ್ನು ನೀಡಲು ತಾಂತ್ರಿಕ ಸಮಸ್ಯೆ ಇದ್ದಿದರಿಂದ ಅದನ್ನು ಸರಿಪಡಿಸಲು ಇಲಾಖೆಯ ಸಹಾಯಕ ನಿರ್ದೇಶಕರು ಬೆಂಗಳೂರಿನ ಕೇಂದ್ರ ಕಚೇರಿಗೆ ತೆರಳಿದ್ದಾರೆ ಎಂದರು.

ಮುಂದಿನ ತಿಂಗಳು 25ನೇ ತಾರೀಖಿನೊಳಗೆ ಸಬ್ಸಿಡಿ ಕೊಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು
ರೈತ ಸಂಘದ ಮುಖಂಡರಾದ ಸ್ವಾಮಿಗೌಡ, ಸಚಿನ್, ಬಸವರಾಜು, ಮಲ್ಲಿಕಾರ್ಜುನ್, ರಾಜೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net