ಮಳೆಯಲ್ಲೂ ಕುಗ್ಗದ ಉತ್ಸಾಹ

28 KAMPLI 01B
Published on

ಕಂಪ್ಲಿ: ತಾಲೂಕಿನಾದ್ಯಂತ ಜಿಟಿಜಿಟಿ ಮಳೆ ಮಧ್ಯೆಯೂ ಗಣಪತಿ ಹಬ್ಬದ ಸಂಭ್ರಮ ಕಂಡುಬಂತು.

ಗಣೇಶ ಪ್ರತಿಷ್ಠಾಪನೆ ದಿನವಾದ ಬುಧವಾರ ತಾಲೂಕಿನಲ್ಲಿ 1.6 ಮಿ.ಮೀ. ಮಳೆ ಸುರಿದಿದೆ. ಮಳೆಯಲ್ಲೇ ಜನರು ಸಾರ್ವಜನಿಕ ಗಣಪತಿ ಮೂರ್ತಿಗಳ ವೀಕ್ಷಣೆ ಮಾಡಿದರು. ಕಂಪ್ಲಿ ಠಾಣೆ ವ್ಯಾಪ್ತಿಯ 153 ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದಲ್ಲಿ 66, ಗ್ರಾಮೀಣ ಪ್ರದೇಶದಲ್ಲಿ 87ಗಣಪತಿ ಮೂರ್ತಿಗಳನ್ನು ಸ್ಥಾಪಿಸಲಾಗಿತ್ತು. ಇಂಡಿಯನ್ ರಿಸರ್ವ್ ಪೊಲೀಸ್ ಒಂದು ಬೆಟಾಲಿಯನ್, ಗೃಹರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಬುಧವಾರ ನಾಲ್ಕು ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net