

ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು,ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ತುರ್ತು ದುರಸ್ತಿಗೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು,ತಹಸೀಲ್ದಾರ್‌ಗಳು,ಮಳೆಯ ಪರಿಸ್ಥಿತಿ ಸ್ಥಿತಿ ನೋಡಿಕೊಂಡು ಪರಿಹಾರ ಕಾರ‌್ಯಗಳನ್ನು ಸಮರ್ಥ ವಾಗಿ ಕೈಗೊಳ್ಳಬೇಕು.
ಹಳೆಯ ಹಾಗೂದುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮ ವಹಿಸಬೇಕು.ಮನೆ,ಜಾನುವಾರು,ಬೆಳೆ ಹಾ ಗೂ ಪ್ರಾಣಹಾನಿಯಾಗದಂತೆ ಪ್ರಯತ್ನಿಸ ಬೇಕೆಂದರು. ಎಡಿಸಿ ಬಿ.ಟಿ.ಕುಮಾರಸ್ವಾಮಿ,ಎಸಿ ಎಂ.ಕಾರ್ತಿಕ್,ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ,ಡಿಡಿ ಪಿಯು ಎನ್.ರಾಜು ಸೇರಿದಂತೆ ನಾನಾ ಅಧಿಕಾರಿಗಳಿದ್ದರು.