ಮಳೆ,ಬೆಳೆ,ದಾಸ್ತಾನು ನಾಶ

CCC RIAN
Published on

ಚಿತ್ರದುರ್ಗ:ಚಳ್ಳಕೆರೆ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ಸುರಿದು, ಜಮೀನು ಹಾಗೂ ಮನೆಗ ಳಿಗೆ ನುಗ್ಗಿರುವ ನೀರಿನಿಂದಾಗಿ ಬೆಳೆ ಮತ್ತು ದಾಸ್ತಾನು ನಾಶವಾಗಿದೆ. ಮನಮೈನಹಟ್ಟಿ ಗ್ರಾಮದ ಕೆರೆ ಕೋಡಿ ಬಿದ್ದು ಚಳ್ಳಕೆರೆ ನಾಯಕನ ಹಟ್ಟಿಗೆ ತೆರಳುವ ಪ್ರಮುಖ ರಸ್ತೆ ಜಲಾವೃತಗೊಂಡಿದೆ. ಪ್ರಮುಖ ರಸ್ತೆ ಸೇರಿದಂತೆ ಗ್ರಾಮದ ಬಹುತೇಕ ರಸ್ತೆ ಗಳಲ್ಲಿ ನೀರು ಹರಿಯುತ್ತಿದೆ.
ಕೆರೆಕೋಡಿ ಬೀಳಬಹುದೆಂದು ಮೊದಲೇ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅಧಿಕಾರಿಗಳಿನ್ನೂ ಸ್ಥಳಕ್ಕೆ ಆಗಮಿಸಿಲ್ಲ ಗ್ರಾ ಮಸ್ಥರು ಕಿಡಿಕಾರಿದ್ದಾರೆ. ನಾಯಕನಹಟ್ಟಿ ಗ್ರಾಮದಲ್ಲೂ ಧಾರಾಕಾರ ಮಳೆಗೆ ಪೊಲೀಸ್ ಠಾಣೆ ಆವರಣ ಜಲಾವೃತವಾಗಿದೆ.ನಾಯ ಕನಹಟ್ಟಿ ಪಪಂ ಸಿಬ್ಬಂದಿ ನೀರು ಹೊರಹಾಕಿದ್ದಾರೆ. ಚಳ್ಳಕೆರೆರಹೀಂ ನಗರ ಬಡಾವಣೆ ಹಾಗೂ ಏಕಾನಾಥೇಶ್ವರಿ ಬಡಾವಣೆ ಹಲವು ಮನೆ ಗಳಿಗೆ ನೀರು ನುಗ್ಗಿದ್ದು,ಮನೆಗಳಲ್ಲಿದ್ದ ದವಸ ಧಾನ್ಯ,ಗೃಹ ಬಳಕೆ ವಸ್ತುಗಳಿಗೆ ಹಾನಿಯಾಗಿದೆ. ರಹೀಂನಗರದ ಬಹುತೇಕ ರಸ್ತೆಗಳು ಜಲಾವೃತ ಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಈರುಳ್ಳಿ,ಟೊಮೊಟೊ,ಹೂವಿನ ಬೆಳೆ ನಷ್ಟವಾಗಿದೆ.
ಜಿಲ್ಲೆಯಲ್ಲಿ 18.1 ಮಿ.ಮೀ ಮಳೆ
ಮಂಗಳವಾರ ಜಿಲ್ಲೆಯಲ್ಲಿ ಸರಾಸರಿ 18.1 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲೂಕು 34.5 ಮಿ.ಮೀ, ಚಿತ್ರದುರ್ಗ-22.4 ಮಿ..ಮೀ.,ಹಿರಿಯೂರು-9.4 ಮಿ.ಮೀ, ಹೊಳಲ್ಕೆರೆ-8.5 ಮಿ.ಮೀ, ಹೊಸದುರ್ಗ-6.4 ಮಿ.ಮೀ.ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 21.6 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆಯಲ್ಲಿ 25.7 ಮಿ.ಮೀ, ನಾಯಕನಹಟ್ಟಿ 44.5 ಮಿ.ಮೀ,, ಪರಶುರಾಂಪುರ 19.7 ಮಿ.ಮೀ,,ತಳಕು 49.3 ಮಿ.ಮೀ. ಚಿತ್ರದುರ್ಗದಲ್ಲಿ 12.7 ಮಿ.ಮೀ, ಭರಮಸಾಗರ 38.2 ಮಿ.ಮೀ, ಹಿರೇಗುಂಟನೂರು 17.8 ಮಿ.ಮೀ, ತುರುವನೂರು 25.8 ಮಿ.ಮೀ.
ಹಿರಿಯೂರಿನಲ್ಲಿ 5.2 ಮಿ.ಮೀ, ಐಮಂಗಲ 8.8 ಮಿ.ಮೀ, ಧರ್ಮಪುರ 17.1 ಮಿ.ಮೀ, ಜೆ.ಜೆ.ಹಳ್ಳಿ 5.1 ಮಿ.ಮೀ ಮಳೆಯಾ ಗಿದೆ. ಹೊಳಲ್ಕೆರೆಯಲ್ಲಿ 9.7 ಮಿ.ಮೀ, ಬಿ.ದುರ್ಗ 6.9 ಮಿ.ಮೀ, ರಾಮಗಿರಿ 14.1 ಮಿ.ಮೀ, ತಾಳ್ಯ 4.5 ಮಿ.ಮೀ. ಹೊಸದುರ್ಗ ದಲ್ಲಿ 9.1 ಮಿ.ಮೀ, ಮಾಡದಕೆರೆ 1.9 ಮಿ.ಮೀ, ಮತ್ತೋಡು 4.2 ಮಿ.ಮೀ, ಶ್ರೀರಾಂಪುರ 10.5 ಮಿ.ಮೀ.,ಮೊಳಕಾಲ್ಮೂರಿನಲ್ಲಿ 18.6 ಮಿ.ಮೀ ಹಾಗೂ ದೇವಸಮುದ್ರದಲ್ಲಿ 24.9 ಮಿ.ಮೀ ಮಳೆಯಾಗಿದೆ.
49 ಮನೆಗಳು ಭಾಗಶಃ ಹಾನಿ
ಮಂಗಳವಾರ ಸುರಿದ ಮಳೆಗೆ ಜಿಲ್ಲಾದ್ಯಂತ 49 ಮನೆಗಳು ಭಾಗಶಃ ಹಾನಿ, ಹಲವು ಮನೆಗಳಿಗೆ ನೀರು ನುಗ್ಗಿದೆ. 8ಹೆಕ್ಟೇರ್ ತೋಟಗಾರಿಕೆ, 17 ಹೆಕ್ಟೇರ್ ಕೃಷಿ ಬೆಳೆಗೆ ಹಾನಿಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 26 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ-15 ಮನೆಗಳು ಭಾಗಶಃ ಹಾನಿ ಹಾಗೂ 5 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 4 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, ಹಲವು ಮನೆಗಳಿಗೆ ಮನೆಗಳಿಗೆ ನೀರು ನುಗ್ಗಿದೆ.
ಹೊಸದುರ್ಗ ತಾಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿವೆ. ಹಿರಿಯೂರು-4 ಮನೆಗಳು ಭಾಗಶಃ ಹಾನಿಯಾಗಿವೆ. ಮೊಳ ಕಾಲ್ಮೂರು ತಾಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದ್ದು, 13 ಹೆಕ್ಟೇರ್ ಕೃಷಿ ಬೆಳೆ ಹಾಗೂ 3.3 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net