ಮಳೆಗೆ ಶೆಡ್ ಕುಸಿತ

kpp rain
ಶೆಟ್ಟಿಹಡ್ಲು ಗ್ರಾಮದಲ್ಲಿ ಸುಶ್ಮಿತಾ ಅವರ ತಗಡಿನ ಶೀಟಿನ ಶೆಡ್ ಕುಸಿದಿರುವುದು.
Published on

ಕೊಪ್ಪ: ಎರಡು ದಿನ ಬಿಡುವು ನೀಡಿದ್ದ ಮಳೆ ಭಾನುವಾರ ಸಂಜೆ ಸ್ವಲ್ಪ ಬಿರುಸು ಪಡೆದಿತ್ತು.

ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಶೆಟ್ಟಿಹಡ್ಲು ನಿವಾಸಿ ಸುಶ್ಮಿತಾ ಹರೀಶ್ ವಾಸವಿದ್ದ ಶೀಟಿನ ಶೆಡ್ ಶನಿವಾರ ಬೆಳಗ್ಗೆ ಕುಸಿದಿದೆ. ದಂಪತಿಗೆ 10 ವರ್ಷದೊಳಗಿನ ಮೂರು ಪುತ್ರಿಯರು ಇದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಪಂ ಸದಸ್ಯ ರವೀಂದ್ರ ಗಣಪತಿಕಟ್ಟೆ, ಪಿಡಿಒ ಪದ್ಮಲತಾ, ಮುಖಂಡ ಎಚ್.ಕೆ.ವಿಶ್ವ ಭೇಟಿ ನೀಡಿದ್ದರು. ರವೀಂದ್ರ ಅವರು ಸುಶ್ಮಿತಾ ಹರೀಶ್ ಕುಟುಂಬವನ್ನು ಗಡಿಕಲ್‌ನಲ್ಲಿರುವ ಪಂಚಾಯಿತಿ ಕ್ವಾಟ್ರಸ್‌ಗೆ ಸ್ಥಳಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net