ಮಳೆಗೆ ಮೂರು ಮನೆ ಕುಸಿತ

ydg06
Published on

ಸುರಪುರ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ ಮೂರು ಮನೆಗಳು ಕುಸಿದಿದ್ದು, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾನುವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ನಾಗರಾಳ-೨, ತಿಂಥಣಿ-೧ಮನೆ ಕುಸಿದ ವರದಿಯಾಗಿದೆ. ಸತತ ಮಳೆಯಿಂದ ಬೆಳೆಗಳಲ್ಲಿ ನೀರು ನಿಂತಿದ್ದು, ಇದರಿಂದ ಒಣಗಲಾರಂಭಿಸಿವೆ. ಹೀಗಾಗಿ ರೈತರು ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ. ವಾಗಣಗೇರಾ, ದೇವರಗೋನಾಲ, ತಳವಾರಗೇರಾ, ಆಲದ್ದಾಳ, ಪೇಠಾ ಅಮ್ಮಾಪುರ, ಬೋನಾಳ, ದೇವಾಪುರ, ಅರಳಹಳ್ಳಿ, ಮುಷ್ಠಳ್ಳಿ, ಶೆಳ್ಳಗಿ ಸೇರಿ ವಿವಿಧ ಗ್ರಾಮಗಳಲ್ಲಿ ಹೊಲಗಳ ಒಡ್ಡು ಒಡೆದು ಹೋಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಕೂಡಲೇ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಚನ್ನಪ್ಪಗೌಡ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net