ಮಳೆಗೆ ಮಾವಿನ ಬೆಳೆಗೆ ಹಾನಿ

1304 KLB 07
Published on

ಕಲಬುರಗಿ: ತಾಲೂಕಿನ ಮೇಳಕುಂದಾ (ಕೆ) ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಗ್ರಾಮದ ಸಂಗೀತಾ ಪಾಟೀಲ್ ಅವರ ಜಮೀನಿನಲ್ಲಿ ಕೋಯ್ಲಿಗೆ ಬಂದ್ದಿದ ಮಾವು ಉದುರಿ ಹಾಳಾಗಿದೆ. ತೋಟದಲ್ಲಿ ಬರದ ಮಧ್ಯೆಯೂ ಮಾವು ಬೆಳೆದಿದ್ದು, ಕೆಲವೇ ದಿನಗಳಲ್ಲಿ ಕಟಾವು ಮಾಡುವುದಿತ್ತು. ಆದರೆ ಶುಕ್ರವಾರ ಬಿರುಗಾಳಿ ಸಹಿತ ಮಳೆಗೆ ಭಾಗಶಃ ಮಾವಿನ ಫಸಲು ಉದುರಿ ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net