ಮಳೆಗೆ ಮನೆಗಳ ಗೋಡೆ ಕುಸಿತ

4..npk-1,
Published on

ನಾಪೋಕ್ಲು: ಸತತ ಮಳೆಯಿಂದಾಗಿ ಯವಕಪಾಡಿ ಗ್ರಾಮದ ಮೇದರ ಸುಬ್ರಮಣಿ ಹಾಗೂ ಪಾಲೆ ಪಮ್ಮು ಅವರ ವಾಸದ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ.

ಮನೆಯ ಗೋಡೆಗಳು ಶುಕ್ರವಾರ ಬೆಳಗ್ಗೆ ಬಿದ್ದ ಭಾರಿ ಮಳೆಗೆ ಕುಸಿದು ಬಿದ್ದಿದೆ. ಈ ಸಂದರ್ಭ ಮನೆಯಲ್ಲಿದ್ದವರು ಜೀವಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net