ಮಳೆಗೆ ಮನೆ ಗೋಡೆ ಕುಸಿತ

03arsph1ep
ಶನಿವಾರ ಸಂಜೆ ಸುರಿದ ಮಳೆಗೆ ಬಾಬಾ ಸಾಹೇಬ ಕಾಲನಿಯ ನಿವಾಸಿ ಅಶುಬಿ ಅವರ ಮನೆ ಗೋಡೆ ಕುಸಿದುಬಿದ್ದಿರುವುದು.
Published on

ಅರಸೀಕೆರೆ: ನಗರದ ಬಾಬಾ ಸಾಹೇಬ ಕಾಲನಿಯಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಮನೆ ಗೋಡೆ ಕುಸಿದು ಬಿದ್ದಿದೆ. ಬಡಾವಣೆಯ ಎರಡನೇ ತಿರುವಿನಲ್ಲಿರುವ ಅಶುಬಿ ಎಂಬುವರ ಮನೆಯಲ್ಲಿ ಸಂಭವಿಸಿದ್ದು, ಬಟ್ಟೆ, ಎಲೆಕ್ಟ್ರಾನಿಕ್ ವಸ್ತು ಸೇರಿದಂತೆ ಆಹಾರ ಸಾಮಗ್ರಿಗಳು ಮಣ್ಣುಪಾಲಾಗಿವೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net