

ಹೂವಿನಹಡಗಲಿ: ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಸುರಿದ ಮಳೆಗೆ ನಾಲ್ಕು ಮನೆಗಳು ಭಾಗಶಃ ಹಾನಿಗೀಡಾಗಿವೆ. ಕೃಷಿ ಜಮೀನಿಗೆ ನೀರು ನುಗ್ಗಿದೆ.
ಗೋವಿಂದಪುರ ತಾಂಡಾ, ಚಿಕ್ಕಕೊಳಚಿ, ಕೆ.ಕೆ.ತಾಂಡಾ, ಲಿಂಗನಾಯಕನಹಳ್ಳಿಯಲ್ಲಿ ತಲಾ ಒಂದು ಮನೆಯ ಗೋಡೆ ಕುಸಿದಿದೆ. ಪಟ್ಟಣದಲ್ಲಿ ರಸ್ತೆ ಗುಂಡಿಯಲ್ಲಿ ನೀರು ನಿಂತ ಕಾರಣ ವಾಹನಸವಾರರು ಸಂಚರಿಸಲು ಪರದಾಡಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಅಂಗಡಿಗಳಲ್ಲಿ ಆಶ್ರಯ ಪಡೆದಿದ್ದರು. ತಾಲೂಕಿನಲ್ಲಿ 28.7 ಮಿ.ಮೀ ಮಳೆಯಾಗಿದೆ.