

ಅಫಜಲಪುರ: ತಾಲೂಕಿನ ಅತನೂರ ಹೋಬಳಿ ವ್ಯಾಪ್ತಿಯ ಗುಡೂರು ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ಗ್ರಾಮದ ರೈತ ಗುಂಡಪ್ಪ ಬಿ.ಪಟ್ಟಣ ಅವರ ಜಮೀನಿನಲ್ಲಿ ಕೋಯ್ಲಿಗೆ ಬಂದಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ಧರೆಗುರುಳಿದೆ. ಮೂರು ಎಕರೆಯಲ್ಲಿ ಪಪ್ಪಾಯಿ ಬೆಳೆದಿದ್ದು, ಕೆಲವೇ ದಿನಗಳಲ್ಲಿ ಕೋಯ್ಲು ಮಾಡಲು ಬಂದಿತ್ತು. ಆದರೆ ಗುರುವಾರ ಎದುರಾದ ಬಿರುಗಾಳಿ ಸಹಿತ ಮಳೆಗೆ ಇಡೀ ಜಮೀನಿನಲ್ಲಿ ಪಪ್ಪಾಯಿ ಗಿಡಗಳು ಧರಾಶಾಯಿಯಾಗಿದೆ.