

ಬೇಲೂರು: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಲಕ್ಷ್ಮೀಪುರ, ಎನ್.ನಿಡಗೋಡು ಗ್ರಾಮಗಳಲ್ಲಿ 10 ಎಕರೆಗೂ ಹೆಚ್ಚು ನಾಟಿ ಮಾಡಿದ್ದ ಭತ್ತದ ಗದ್ದೆ ನೀರಿನಲ್ಲಿ ಕೊಚ್ಚಿ ಹೋಗಿವೆ.
ತಾಲೂಕಿನ ಲಕ್ಷ್ಮೀಪುರ ಹಾಗೂ ಎನ್.ನಿಡಗೋಡು ಗ್ರಾಮಗಳ ಭಾಗದಲ್ಲಿರುವ 8ಕ್ಕೂ ಹೆಚ್ಚಿನ ಕೆರೆ ಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ಲಕ್ಷ್ಮೀಪುರ ಗ್ರಾಮದ ಕೆರೆಯ ತಡೆಗೋಡೆ ಕುಸಿದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿದೆ. ನೀರು ಹೊರ ಹೋಗಲು ನಿರ್ಮಿಸಿದ್ದ ಕಾಲುವೆಯೂ ಒಡೆದು ನೀರು ಹರಿದಿದ್ದರಿಂದ ಕೆಲ ದಿನಗಳ ಹಿಂದಷ್ಟೆ ನಾಟಿ ಮಾಡಿದ್ದ ಭತ್ತದ ಗದ್ದೆ ಹಾಗೂ ನಾಟಿಗಾಗಿ ಮಡಿ ಮಾಡಿದ್ದ ಸಸಿಗಳು ಕೊಚ್ಚಿ ಹೋಗಿವೆ. ಅಲ್ಲದೆ ಗ್ರಾಮದಲ್ಲಿನ ಕಾಫಿ, ಬಾಳೆ ಬೆಳೆದಿದ್ದ ಜಮೀನುಗಳಿಗೂ ನೀರು ನುಗ್ಗಿದೆ. ಇದರಿಂದಾಗಿ ರೈತರಿಗೆ ಸಾಕಷ್ಟು ನಷ್ಟ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೇಲೂರು ತಾಲೂಕಿನ ಲಕ್ಷ್ಮೀಪುರ ಮತ್ತು ಎನ್.ನಿಡಗೋಡು ಗ್ರಾಮಗಳ ಕೆರೆ ಕಟ್ಟೆಗಳ ತಡೆಗೋಡೆ ಕೊಚ್ಚಿ ಹೋಗಿದ್ದರಿಂದ ಜಮೀನುಗಳ ಮೇಲೆಲ್ಲ ನಿರು ಹರಿಯುತ್ತಿರುವುದು.