ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ರಸ್ತೆ

19 HANUR 1
ಹನೂರಿನಿಂದ ಬಂಡಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸ್ವಾಮಿಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಯ ಸಮೀಪದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ರಸ್ತೆಯು ಕೊಚ್ಚಿ ಹೋಗಿ ಕಂದಕ ನಿರ್ಮಾಣವಾಗಿರುವುದು.
Published on

ಹನೂರು: ಪಟ್ಟಣದ ಮೂಲಕ ಲೊಕ್ಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಟ್ಟೆಹಳ್ಳದ ಸೇತುವೆ ಹಾಗೂ ಬಂಡಳ್ಳಿ ಮಾರ್ಗದಲ್ಲಿನ ಸ್ವಾಮಿಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಯ ಸಮೀಪದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ರಸ್ತೆ ಮಳೆಗೆ ಕೊಚ್ಚಿ ಹೋಗಿ ಸಂಚಾರಕ್ಕೆ ಅಡಚಣೆಯಾಗಿದೆ.

ಈ ಮಾರ್ಗದಲ್ಲಿ ಕಂದಕಗಳು ನಿರ್ಮಾಣವಾಗಿದ್ದು, ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕಾದ ಸ್ಥಿತಿ ಬಂದೊದಗಿದೆ. ಇದರಿಂದ ಸಾರ್ವಜನಿಕರಿಗೆ ದೊಡ್ಡ ಸವಾಲು ಎದುರಾದಂತಾಗಿದೆ. ಪಟ್ಟಣದಿಂದ ಲೊಕ್ಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಟ್ಟೆಹಳ್ಳದ ಸೇತುವೆ ಮಾರ್ಗವು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ನಿತ್ಯ ನೂರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಆದರೆ ಈ ಮಾರ್ಗದಲ್ಲಿ ತಟ್ಟೆಹಳ್ಳ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುತ್ತದೆ. ಈ ಬಾರಿ ವಿಪರೀತ ಮಳೆ ಕಾರಣ ಮಾರ್ಗವು ಸಂಚಾರಕ್ಕೆ ತುಂಬಾ ತೊಡಕಾಗಿದೆ.

ಕಳೆದ 10 ವರ್ಷದ ಹಿಂದೆ ಇಲ್ಲಿ ಕಿರು ಸೇತುವೆ ನಿರ್ಮಿಸಲಾಗಿತ್ತು. ಕಳೆದ 5 ವರ್ಷಗಳಿಂದ ಈ ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ನಿರ್ಮಾಣವಾಗಿದ್ದವು. ನೀರು ಹರಿಯಲು ಹಾಕಿದ್ದ ಪೈಪ್‌ಗಳು (ತೂಬು) ಶಿಥಿಲಗೊಂಡಿದ್ದವು. ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಮಳೆ ಸುರಿದಾಗ ನೀರು ಸೇತುವೆಯ ಮೇಲೆ ಗಂಟೆಗಟ್ಟಲೆ ಹರಿಯುತ್ತಿತ್ತು. ಇದರಿಂದ ಈ ಭಾಗದ ಜನ- ವಾಹನ ಸಂಚಾರಕ್ಕೆ ಸರ್ಕಸ್ ಮಾಡುವ ಸ್ಥಿತಿ ಒದಗಿತ್ತು. ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳಲು ತಾಸುಗಟ್ಟಲೇ ಕಾದು ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಇನ್ನು ಬೈಕ್ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net