ಮಳೆಗೆ ಕೆಸರು ಗದ್ದೆಯಾದ ಬಸ್ ನಿಲ್ದಾಣ:ಸಂಚರಿಸಲು ಪ್ರಯಾಣಿಕರಿಗೆ ಸಂಕಷ್ಟ

Untitled design (3)
ಸಿರವಾರ ಪಟ್ಟಣದ ಬಸ್ ನಿಲ್ದಾಣ ಮಳೆಯಿಂದಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿರುವುದು.
Published on

ಸಿರವಾರ: ಪಟ್ಟಣದ ಬಸ್ ನಿಲ್ದಾಣ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.


ಪಟ್ಟಣದಿಂದ ಪ್ರತಿನಿತ್ಯ ನೂರಾರು ಬಸ್, ಸಾವಿರಾರೂ ಪ್ರಯಾಣಿಕರು ಸಂಚರಿಸುತ್ತಾರೆ. ಬಸ್ ನಿಲ್ದಾಣದ ನೂತನ ಕಟ್ಟಡ ಕಾಮಗಾರಿ ನಿರ್ಮಾಣ ಆಮೆಗತಿಯಲ್ಲಿ ನಡೆಯುತ್ತಿದೆ. ನಿಲ್ದಾಣದ ಅವರಣದಲ್ಲಿ ಬೃಹತ್ ಆಕಾರದ ತಗ್ಗುಗಳು ಇದ್ದು ಸಂಪೂರ್ಣ ನೀರಿನಿಂದ ತುಂಬಿವೆ. ಮಳೆ ಬಂದ ಪ್ರತಿ ಬಾರಿ ಇದೇ ರೀತಿ ಸಮಸ್ಯೆ ಎದುರಾಗುತ್ತಿದ್ದು ಅಧಿಕಾರಿ, ಜನಪ್ರತಿನಿಧಿಗಳು ದುರಸ್ತಿ ಮಾಡಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net