ಮಳೆಗೆ ಕೆರೆಯಂತಾಗುವ ಶಾಲಾ ಆವರಣ

ydg01
Published on

ಕೊಡೇಕಲ್: ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸಬರು ಯಾರಾದರೂ ಭೇಟಿ ನೀಡಿದರೆ ಇದು ಶಾಲಾ ಆವರಣವೋ ಅಥವಾ ಕೆರೆಯೋ ಎಂದು ಒಂದು ಕ್ಷಣ ಗೊಂದಲಕ್ಕೀಡಾಗದೇ ಇರಲಾರರು.

ಮಳೆಯಾದರೆ ಸಾಕು ವಲಯದ ಬರದೇವನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಸಂಪೂರ್ಣ ಜಲಾವೃಗೊಂಡು ಕೆರೆಯಂತಾಗುತ್ತದೆ. ಗ್ರಾಮದ ಹೊರವಲಯದಲ್ಲಿರುವ ಈ ಶಾಲೆಯಲ್ಲಿ ೧ರಿಂದ ೮ ನೇ ತರಗತಿವರೆಗೆ ಹೊಂದಿದ್ದು, ೩೦೦ಕ್ಕೂ ಅಧಿಕ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.

ನಿತ್ಯ ಮಕ್ಕಳ ಪ್ರಾರ್ಥನೆ, ಆಟೋಟ ಕೆಲವೊಮ್ಮೆ ಮರಗಳ ನೆರಳಡಿಯಲ್ಲಿ ಮಕ್ಕಳಿಗೆ ಕಿರು ಪರಿಕ್ಷೆ ಕೂಡ ನಡೆಸಲಾಗುತ್ತದೆ. ಆದರೆ ಮಳೆಗಾಲ ದಿನಗಳಲ್ಲಿ ಮಾತ್ರ ಮಕ್ಕಳು ಶಾಲಾ ಕೋಡೆಯಿಂದ ಹೊರಗಡೆ ಬರುವಂತಿಲ್ಲ. ಹಾಗೊಂದು ವೇಳೆ ನಿರಂತರ ಮಳೆ ಸುರಿದರೆ ಪ್ರಾರ್ಥನೆ ಮಕ್ಕಳ ಶಾಲಾ ಕೋಣೆಯಲ್ಲಿಯೇ ಮಾಡುವುದು ಅನಿವಾರ್ಯ. ಇದರಿಂದ ಶಿಕ್ಷಕರು ಮತ್ತು ಮಕ್ಕಳು ತೀವ್ರ ಸಂಕಷ್ಟ ಎದರಿಸಬೇಕಾಗಿದೆ.

ಮಳೆಗಾಗಲದಲ್ಲಿ ಶಾಲೆಗೆ ಮಕ್ಕಳು ಬರಬೇಕಾದರೆ ಮತ್ತು ಶಾಲೆಯಿಂದ ಹೋಗಬೇಕಾದರೆ ಸರ್ಕಸ್ ಮಾಡಬೇಕು. ಇಲ್ಲವೆ ಶಾಲೆಗೆ ರಜೆ ನೀಡಬೇಕು. ಆವರಣದಲ್ಲಿ ಸುರಿದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ದಾರಿ ಇಲ್ಲದ ಕಾರಣ ಇಷ್ಟೊಂದು ಪ್ರಮಾಣದಲ್ಲಿ ಸೇಖರಣೆಯಾಗಿ ಮಕ್ಕಳ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ.

ಶಾಲೆಯಲ್ಲಿ ಇಷ್ಟೊಂದು ಸಮಸ್ಯೆ ಇದ್ದರು ಗ್ರಾಮ ಪಂಚಾಯಿತಿ ಗಮನ ಹರಿಸುತ್ತಿಲ್ಲ. ಅಲ್ಲದೆ ಶಾಲೆಗೆ ಆಟದ ಮೈದಾನಕ್ಕಾಗಿ ಸ್ಥಳ ನೀಡುವುದು ಸೇರಿ ಅನೇಕ ಸಮಸ್ಯೆ ಕುರಿತು ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಕ್ಕಳಿಗೆ ಮಳೆಗಾಲ ಬಂತೆAದರೆ ಸಾಕು ಶಾಲೆಗೆ ಹೋಗುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಈಗಲಾದರೂ ಗ್ರಾಪಂ ಪಿಡಿಒ ಸಂಬAಧಿಸಿದ ಅಧಿಕಾರಿಗಳು ಗಮನ ಹರಿಸಿ ಶಾಲಾ ಸಮಸ್ಯೆಗೆ ಸ್ಪಂದಿಸುವರೆ ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net