ಮಳೆಗೆ ಕುಸಿದ ರಸ್ತೆ

28CHR01
Published on

ಚೌಳಹಿರಿಯೂರು: ವಿವಿಧೆಡೆ ಬುಧವಾರ ರಾತ್ರಿ ಭಾರಿ ಮಳೆಗೆ ಗ್ರಾಮದ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಚೌಳಹಿರಿಯೂರು-ಆಲದಹಳ್ಳಿ ರಸ್ತೆ 8 ತಿಂಗಳ ಹಿಂದೆ ಕುಸಿದಿತ್ತು. ಪೈಪ್ ಅಳವಡಿಸಿ ತಾತ್ಕ್ಕಾಲಿಕ ದುರಸ್ತಿ ಮಾಡಲಾಗಿತ್ತು. ಆದರೆ ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ ಪುನಃ ಅದೇ ಜಾಗದಲ್ಲಿ ಕುಸಿದಿದೆ. ಹಿ.ತಿಮ್ಮಾಪುರ ತಾಂಡಾದ ಬಳಿ ಕಾಲುವೆ ಒಡೆದು ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಚೌಳಹಿರಿಯೂರು ಕೆರೆ ಕೋಡಿಯಿಂದ ನೀರು ಕೃಷಿ ಭೂಮಿಗೆ ನುಗ್ಗಿ ತರಕಾರಿ ಬೆಳೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net