ಮಳೆಗೆ ಕುಶಾಲನಗರ ತತ್ತರ

rain
Published on

ಕೊಡಗು : ಕುಶಾಲನಗರದಲ್ಲಿ ಗುರುವಾರ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಹೆದ್ದಾರಿ ತಾವರೆಕೆರೆ ಬಳಿ ಮಳೆ ನೀರಿನಿಂದ ವಾಹನ ಸವಾರರು ಕೆಲ ಕಾಲ ಪರದಾಡಿದರು. ಸೋಮೇಶ್ವರ ದೇವಸ್ಥಾನದ ಸಮೀಪ ರಸ್ತೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಮಾಡದ ಕಾರಣ ಮಾರ್ಗ ಜಲಾವೃತವಾಗಿತ್ತು.


ಕುಶಾಲನಗರ ಹಾಸನ ರಸ್ತೆಯ ರಾಮಸ್ವಾಮಿ ಕಣಿವೆ ಬಳಿಯಲ್ಲಿ ಮಳೆ ನೀರು ರಸ್ತೆಯಲ್ಲಿ ಸಂಗ್ರಹವಾದ ಕಾರಣ ಪರ್ಯಾಯ ರಸ್ತೆ ಮೂಲಕ ವಾಹನ ಸಂಚರಿಸಿದವು. ಬಿಎಂ ರಸ್ತೆಯ ಹಲವು ಹೋಟೆಲ್ ಮತ್ತು ಅಂಗಡಿಗಳಿಗೆ ನೀರು ನುಗ್ಗಿ ಪದಾರ್ಥಗಳು ನಷ್ಟವಾಗಿದೆ.


ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್, ಎಪಿಸಿಎಂಎಸ್ ಗೋದಾಮು ತಡೆಗೋಡೆ ಬಿದ್ದು ಹೋಗಿದೆ. ಸಮೀಪದಲ್ಲೇ ಇರುವ ಮೊಬೈಲ್ ಫೋನ್ ಟವರ್ ಮತ್ತು ಅದರ ಜನರೇಟರ್ ರೂಂ ಬೀಳುವ ಹಂತದಲ್ಲಿದೆ. ಇದರಿಂದ ಆತಂಕ ಎದುರಾಗಿದೆ ಎಂದು ನಿವಾಸಿಗಳಾದ ಕೆ.ಜೆ.ನಾಗೇಂದ್ರಗುಪ್ತ, ಚೆಂಗಪ್ಪ, ಕೆ.ಜೆ.ರಮೇಶ್ ಪಟ್ಟಣ ಪಂಚಾಯಿತಿಗೆ ಲಿಖಿತ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net