ಮಳೆಗಾಳಿ: ಮನೆ ಮೇಲೆ ಉರುಳಿದ ಬೃಹತ್ ಮರ

RPT RAIN WEB
Published on

ರಿಪ್ಪನ್‌ಪೇಟೆ: ಶನಿವಾರ ಮಧ್ಯಾಹ್ನ ಸುರಿದ ಹಠಾತ್ ಮಳೆಗಾಳಿಗೆ ಮರವೊಂದು ಬುಡಸಮೇತ ಮನೆಯ ಮೇಲೆ ಬಿದ್ದು, ಹಾನಿಯಾಗಿರುವ ಘಟನೆ ಕೆರೆಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪಲ್ಲವಿ ಅಶೋಕ ಎಂಬುವರ ಮನೆಯ ಮೇಲೆ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ನಂದಿಮರ ಉರುಳಿಬಿದ್ದಿದ್ದು, ಭಾಗಶಃ ಮನೆ ಜಖಂಗೊಂಡಿದೆ. ಮನೆಯಲ್ಲಿ ಯಾರು ಇಲ್ಲದಿರುವ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಉಪತಹಸೀಲ್ದಾರ್ ಹುಚ್ಚರಾಯಪ್ಪ, ಪಿಡಿಒ ಚಂದ್ರಶೇಖರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net