

ಕಲಬುರಗಿ: ಮಳೆಗಾಲದಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶುಚಿ, ರುಚಿ ಆಹಾರ ಸೇವಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಖ್ಯಾತ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞೆ ಡಾ.ಇಂದಿರಾ ಶಕ್ತಿ ಸಲಹೆ ನೀಡಿದರು.
ಹಿಂಗುಲಾAಬಿಕ ಶಿಕ್ಷಣ ಸಂಸ್ಥೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಮಲ್ಲೇಶಪ್ಪ ಮಿಣಜಿಗಿ ಪ್ರತಿಷ್ಠಾನದ ಸಹಯೋಗದಲ್ಲಿ ಗಾಜಿಪುರದ ಅತ್ತರ್ ಕಾಂಪೌAಡ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆವಹಿಸಿ ಆರೋಗ್ಯದ ಕಡೆ ಹೆಚ್ಚಿನ ಲಕ್ಷö್ಯವಹಿಸಬೇಕು. ಆರೋಗ್ಯಪೂರ್ಣ ನೆಮ್ಮದಿ ಜೀವನ ನಡೆಸಲು ವೈದ್ಯರ ಸಲಹೆ ಚಾಚೂ ತಪ್ಪದೆ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಅಲ್ಲಮಪ್ರಭು ಗುಡ್ಡ ಮಾತನಾಡಿ, ಸದ್ಯ ಕಂಡು ಬರುತ್ತಿರುವ ಅನೇಕ ಕಾಯಿಲೆಗಳಿಗೆ ಆಹಾರ ಮತ್ತು ಜೀವನಶೈಲಿಯೇ ಪ್ರಮುಖ ಕಾರಣ. ಪೌಷ್ಠಿಕ ಆಹಾರ, ಯೋಗ, ಲಘು ವ್ಯಾಯಾಮ, ಆತಂಕ ರಹಿತ ಜೀವನ ಶೈಲಿಯಿಂದ ಮುನ್ನಡೆದರೆ ನೆಮ್ಮದಿ ಹಾಗೂ ಆರೋಗ್ಯ ಪೂರ್ಣ ಜೀವನ ನಡೆಸಬಹುದಾಗಿದೆ. ಕರಿದ ಪದಾರ್ಥಗಳು, ಜಂಕ್‌ಪುಡ್ ಆಹಾರಗಳ ಮೊರೆ ಹೋಗದೆ ತಾಜಾ ತರಕಾರಿ, ಹಣ್ಣು ಹಂಪಲು ಸೇವಿಸಿ ಸದೃಢ ಆರೋಗ್ಯ ಹೊಂದಬೇಕು. ಡಾ.ಇಂದಿರಾ ಶಕ್ತಿಯವರ ನೇತೃತ್ವದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಚಿಕಿತ್ಸಾ ಶಿಬಿರದ ಲಾಭ ಪಡೆದುಕೊಂಡು ಆರೋಗ್ಯವಂತರಾಗಿ ಬಾಳಬೇಕು ಎಂದರು.
ಡಾ.ವಿವೇಕಾನAದ ಪಾಟೀಲ್, ಡಾ. ಸಪ್ನಾ ಕಾಬಾ, ಡಾ.ಓಂಕಾರ ಜೇವೂರ್, ಡಾ. ಸೃಷ್ಟಿ ವೈದ್ಯ, ಡಾ.ಪ್ರಮೋದ, ಡಾ. ಪ್ರಜ್ವಲ ಮಾಲಿಪಾಟೀಲ್, ಡಾ. ಸೊಹೇಲ್ ನದಾಫ್, ಡಾ.ಶೇಖ ಡ್ಯಾನಿಶ್ ಇತರರಿದ್ದರು. ಸುಮಾರು ೧೦೦ಕ್ಕೂ ಜನರು ತಪಾಸಣೆಗೆ ಒಳಗಾಗಿ, ಉಚಿತ ಔಷಧಿ ಪಡೆದುಕೊಂಡರು.