

ಚಿಕ್ಕಮಗಳೂರು: ಮಳೆಗಾಲ ಮುಗಿದ ಬಳಿಕ ನಗರದ ಎಲ್ಲ ರಸ್ತೆಗಳನ್ನು ಸುಮಾರು ೧೨.೫ ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ನಗರದ ರಾಂಪುರದಿAದ ಕತ್ರಿ ಮಾರಮ್ಮ ದೇವಸ್ಥಾನದವರೆಗಿನ ರಾಷ್ಟಿçÃಯ ಹೆದ್ದಾರಿ ಮಧ್ಯಭಾಗದಲ್ಲಿ ೧೫ನೇ ಹಣಕಾಸು ಯೋಜನೆಯಡಿ ೯೫ ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿರುವ ಬೀದಿ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದರು.
ಅತಿ ಹೆಚ್ಚು ಮಳೆಯಿಂದ ನಗರದಲ್ಲಿ ರಸ್ತೆಗಳಿಗೆ ಹಾನಿಯಾಗಿದೆ. ನಗರಸಭೆ ಇಂಜಿನಿಯರ್‌ಗಳು ರಸ್ತೆ ದುರಸ್ಥಿಗೆ ಬೇಕಾದ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಕಾರ್ಯಾದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಗಾಲ ಮುಗಿದ ಬಳಿಕ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಅನುದಾನ ಘೋಷಣೆ ಮಾಡಿದ್ದು, ಜು. ೩೦, ೩೧ರಂದು ಅವರನ್ನು ಭೇಟಿಮಾಡಿ ಬಹುಪಾಲು ಅನುದಾನವನ್ನು ಪಡೆದು ನಗರದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ಹೆದ್ದಾರಿಯಲ್ಲಿಯೇ ಬೀದಿ ದೀಪಗಳು ಇಲ್ಲದಿರುವುದರಿಂದ ನಾಗರಿಕರಿಗೆ ತೊಂದರೆಯಾಗಿತ್ತು. ಇದೀಗ ನಗರದ ಹೆದ್ದಾರಿಯಿಂದ ಸುತ್ತಮುತ್ತಲ ವಾರ್ಡ್ಗಳಿಗೆ ತೆರಳುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ದೀಪಗಳಿಗೆ ಚಾಲನೆ ನೀಡಲಾಗಿದೆ. ಇದರಿಂದಾಗಿ ರಾತ್ರಿ ವೇಳೆಯೂ ಸಾರ್ವಜನಿಕರು ಧೈರ್ಯವಾಗಿ ಓಡಾಡಬಹುದಾಗಿದೆ ಎಂದರು.
ನಗರದ ಜನತೆಗೆ ಸ್ವಚ್ಚತೆ, ಕುಡಿಯುವ ನೀರು, ಬೀದಿದೀಪ ಮುಂತಾದವುಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡುತ್ತೇನೆ. ಪ್ರತಿದಿನ ಕಸ ಸಂಗ್ರಹಣೆಗೆ ಗಂಟೆಗಾಡಿ ಬರುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಕರೆದು ಪ್ರತಿ ದಿನ ಮನೆಯಲ್ಲಿಯೇ ಒಣ ಕಸ, ಹಸಿ ಕಸ ವಿಂಗಡಿಸಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಕಾರ್ಯ ಯಶಸ್ವಿಯಾಗಬೇಕಾದರೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಹೌಸಿಂಗ್‌ಬೋರ್ಡ್ ಮತ್ತು ಕಲ್ಯಾಣ ನಗರದಲ್ಲಿ ಸ್ಥಳೀಯರು ವೆಲ್ಫೇರ್ ಟ್ರಸ್ಟ್ ರಚಿಸಿ ಸಹಕಾರ ನೀಡಿದ್ದಾರೆ. ಇದೇ ಮಾದರಿಯಲ್ಲಿ ನಗರದ ಎಲ್ಲ ವಾರ್ಡ್ಗಳಲ್ಲಿಯೂ ವೆಲ್ಫೇರ್ ಟ್ರಸ್ಟ್ ರಚಿಸುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಸ ವಿಲೇವಾರಿ ಮಾಡುವುದು ದೇಶದಲ್ಲೇ ಒಂದು ಪಿಡುಗಾಗಿದೆ. ಜೊತೆಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರಸಭೆ ವಿಧಿಸಿರುವ ಸೂಚನೆಗಳನ್ನು ನಾಗರಿಕರು ಪಾಲಿಸುವ ಮೂಲಕ ಸಾರ್ವಜನಿಕ ಸಹಭಾಗಿತ್ವ ತೋರಬೇಕಾಗಿದೆ. ಈ ಮೂಲಕ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆನೀಡಿದರು.
ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಬೀದಿದೀಪ ಉದ್ಘಾಟಿಸಿದ ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ನಗರಸಭೆ ಮತ್ತು ೩೫ನೇ ವಾರ್ಡ್ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಸದಸ್ಯ ಎ.ಸಿ. ಕುಮಾರಗೌಡ ಮಾತನಾಡಿ, ನಮ್ಮ ವಾರ್ಡಿನಲ್ಲಿ ಬೀದಿದೀಪ ಇಲ್ಲದೆ ನಾಗರಿಕರಿಗೆ ತೊಂದರೆಯಾಗುತ್ತಿತ್ತು. ಜೊತೆಗೆ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿತ್ತು. ಈ ಕತ್ತಲೆ ಕೂಪದಿಂದ ನಮ್ಮನ್ನು ಹೊರತರುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದರು.
ಮುಖ್ಯಮAತ್ರಿಗಳ ವಿಶೇಷ ಅನುದಾನವನ್ನು ತಂದು ಶಾಸಕರು ನಗರದ ಎಲ್ಲಾ ವಾರ್ಡ್ಗಳಲ್ಲಿ ಗುಣಮಟ್ಟದ ಚರಂಡಿ, ಪಾರ್ಕ್, ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ಪರಮೇಶ್ ರಾಜ್ ಅರಸ್, ರೂಪಾ ಕುಮಾರ್, ಲಕ್ಷö್ಮಣ್, ಅರುಣ್ ಕುಮಾರ್, ಗೋಪಿ, ಗುರುಮಲ್ಲಪ್ಪ, ಸಿ.ಪಿ ಲಕ್ಷö್ಮಣ, ಮಾಜಿ ಸದಸ್ಯರಾದ ದಿನೇಶ್, ಶ್ರೀಧರ್ ಉರಾಳ್, ಜೇಮ್ಸ್, ಎಂ.ಸಿ. ಪ್ರಕಾಶ್, ಆಯುಕ್ತ ಬಿ.ಸಿ ಬಸವರಾಜು ಮತ್ತಿತರರಿದ್ದರು.