ಮಳೆಗಾಗಿ ಶ್ರೀ ಬಲ್ಲಾಳೇಶ್ವರ ಸ್ವಾಮಿಗೆ ಪೂಜೆ

kdr pooja
ಸಖರಾಯಪಟ್ಟಣದ ಶ್ರೀ ಬಲ್ಳ್‌ಳೇಶ್ವರಸ್ವಾಮಿಗೆ ಮಳೆಗಾಗಿ ಹೋಮ ನಡೆಸಲಾಯಿತು. ಶಾಸಕ ಎಚ್.ಡಿ.ತಮ್ಮಯ್ಯ, ಸಿ.ಟಿ.ರವಿ ಇತರರಿದ್ದರು.
Published on

ಕಡೂರು: ರೈತರ ನೆಮ್ಮದಿ ಬದುಕಿಗೆ ಮಳೆಯೇ ಆಸರೆಯಾಗಿದೆ. ಸಮೃದ್ಧಿ ಜೀವನಕ್ಕೆ ವರುಣನ ಕೃಪೆ ಅತಿ ಅವಶ್ಯಕ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

ಸಖರಾಯಪಟ್ಟಣದ ಅಯ್ಯನಕೆರೆ ಬಳಿ ಶ್ರೀ ಬಲ್ಲಾಳೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಳೆಗಾಗಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಯ್ಯನಕೆರೆ ರೈತರ ಜೀವನಾಡಿಯಾಗಿದ್ದು, ಅದು ತುಂಬಿದಲ್ಲಿ ಸಾವಿರಾರು ಎಕರೆಗೆ ನೀರುಣಿಸಿ ರೈತರ ಬದುಕನ್ನು ಹಸನುಗೊಳಿಸುತ್ತದೆ. ಈ ನಿಟ್ಟಿನಲ್ಲಿ ಅಚ್ಚುಕಟ್ಟುದಾರರು ಮತ್ತು ಸಾರ್ವಜನಿಕರು ಅಯ್ಯನಕೆರೆ ತುಂಬಲು ಪೂಜೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಪ್ರತಿ ವರ್ಷ ಪೂಜೆ ನಡೆಯುತ್ತಿದ್ದು, ಬಲ್ಲಾಳೇಶ್ವರಸ್ವಾಮಿಯ ದೇವಾಲಯದ ಮುಂಭಾಗದಲ್ಲಿ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಅದಕ್ಕೆ ಅನುಕೂಲವಾಗುವಂತೆ ಮೇಲ್ಛಾವಣಿ ನಿರ್ಮಿಸಲು 5 ಲಕ್ಷ ರೂ. ಅನುದಾನ ಒದಗಿಸಲಾಗುವುದು. ಶ್ರಾವಣ ಮಾಸದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಎಂಎಲ್ಸಿ ಸಿ.ಟಿ.ರವಿ ಮಾತನಾಡಿ, ಕೆರೆ ಕಟ್ಟೆಗಳು ನಮ್ಮೆಲ್ಲರ ಜೀವನಾಡಿ. ಅವುಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಳೆಯಿಂದ ಕೆರೆ ಕಟ್ಟೆಗಳು ತುಂಬಿದಾಗ ನೀರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಎಂಎಲ್ಸಿ ಎಸ್.ಎಲ್.ಬೋಜೇಗೌಡ ಮಾತನಾಡಿ, ಅಯ್ಯನಕೆರೆಗೆ ಪೂಜೆ ಸಲ್ಲಿ ಸಿ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಅದು ನಿತ್ಯ ನೂತನವಾಗಿ ನಡೆದುಕೊಂಡು ಬಂದಿದೆ. ಜತೆಗೆ ಕೆರೆ ಅಭಿವೃದ್ಧಿಗೆ ಕಾಮಗಾರಿಗಳು ನಡೆಯಬೇಕಿದೆ. ಇದಕ್ಕೆ ನಮ್ಮ ಸಹಕಾರವೂ ಇರಲಿದೆ. ಜತೆಗೆ ರೈತರಲ್ಲಿ ನೀರು ಮತ್ತು ಕೆರೆ ಬಗ್ಗೆ ಕಾಳಜಿ ಇರಬೇಕು ಎಂದರು.

ಸೇವಾಸಮಿತಿ ಅಧ್ಯಕ್ಷ ಎಸ್.ಪಿ.ಲೋಕೇಶ್, ಸದಸ್ಯರು, ಮಹಡಿಮನೆ ಸತೀಶ್, ಕಲ್ಮರುಡಪ್ಪ, ಲೋಕೇಶ್, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net