ಮಳೆಗಾಗಿ ವಿರಾಟಪರ್ವ ಆರಾಧನೆ

mkg1b
Published on

ಜಗಳೂರು: ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮತ್ತು ಕಪ್ಪೆಗಳಿಗೆ ಮದುವೆ ಮಾಡುವುದನ್ನು ಕಂಡಿದ್ದೇವೆ. ಆದರೆ, ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿರಾಟಪರ್ವ ಆರಾಧನೆ ಮೂಲಕ ಶನಿವಾರ ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿದರು.

ಕಳೆದ ವರ್ಷ ಉತ್ತಮ ಮಳೆಯಿಂದ ಕೆರೆ ಕಟ್ಟೆಗಳು ತುಂಬಿತ್ತು. ಆದರೆ, ಈ ಬಾರಿ ಆರಂಭದಲ್ಲಿಯೇ ಮುಂಗಾರು ಮಳೆ ಕೈಕೊಟ್ಟು ಬೆಳೆಗಳು ಒಣಗಲಾರಂಭಿಸಿವೆ.

ಹಾಗಾಗಿ, ಬಹುತೇಕ ಗ್ರಾಮಗಳಲ್ಲಿ ರೈತರು, ಗ್ರಾಮಸ್ಥರು ದೇವರ ಮೊರೆ ಹೋಗುತ್ತಿದ್ದಾರೆ. ಅದರಂತೆ ಸಿಎಂ ಹೊಳೆಯಲ್ಲೂ ಮಹಾಭಾರತದ ವಿರಾಟ ಪರ್ವ ಆರಾಧನೆಗೆ ಮುಂದಾಗಿದ್ದಾರೆ.

ಮಹಾಭಾರತದ 18 ಪರ್ವಗಳಲ್ಲಿ ವಿರಾಟಪರ್ವವು ನಾಲ್ಕನೇ ಪರ್ವವಾಗಿದ್ದು, ವಿರಾಟಪರ್ವವು ಹತ್ತು ಸಂಧಿಗಳು, 800 ಪದ್ಯಗಳನ್ನು ಹೊಂದಿದೆ.

ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ವಿರಾಟಪರ್ವ ಆರಾಧನೆ ಮಾಡಲಾಯಿತು. ಒಬ್ಬರು ಪದ್ಯಗಳನ್ನು ಓದಿದರೆ ಮತ್ತೊಬ್ಬರು ಆ ಪದ್ಯದ ಅರ್ಥ ಬಿಡಿಸಿ ಕಥೆಯ ರೂಪದಲ್ಲಿ ವಿಸ್ತಾರವಾಗಿ ಜನರಿಗೆ ತಿಳಿಯಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net