ಮಳೆಗಾಗಿ ಬುಟ್ಟಿಜಾತ್ರೆ ವಿಶೇಷ ಪೂಜೆ

IMG-20230816-WA0007
Published on

ಭಾಲ್ಕಿ: ತಾಲ್ಲೂಕಿನ ತೇಗಂಪೂರ ಗ್ರಾಮಸ್ಥರು ಅನೇಕ ದಿನಗಳಿಂದ ಮಳೆ ಬಾರದೆ ಇರುವುದರಿಂದ ಮಹದೇವ ಮಂದಿರದಲ್ಲಿ ಬುಟ್ಟಿಜಾತ್ರೆ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅನೇಕ ದಿನಗಳಿಂದ ಮಳೆ ಬಾರದೆ ಇರುವುದರಿಂದ  ರೈತರ ಹೊಲಗಳಲ್ಲಿನ ಬೆಳೆಗಳು ಬಾಡಿ ಹೋಗಿದ್ದು, ಅನ್ನದಾತರು ಬಹಳ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಗ್ರಾಮದ ಎಲ್ಲಾ ಮಹಿಳೆಯರು, ಗ್ರಾಮಸ್ಥರು ಸೇರಿಕೊಂಡು ಮಹದೇವ ದೇವಸ್ಥಾನದಲ್ಲಿ ಶಿರಾಭಿಷೇಕ, ಹಾಲಿನ ಅಭಿಷೇಕದಿಂದ ವಿಶೇಷ ಪೂಜೆ, ನೈವೇದ್ಯ ಅರ್ಪಿಸಿದರು.

ನಂತರ ಎಲ್ಲಾ ಗ್ರಾಮಸ್ಥರು ಕೂಡಿಕೊಂಡು ಊಟ ಮಾಡಿದರು. ಮಹಿಳೆಯರಿಂದ ಭಜನೆ, ಕೀರ್ತನೆ, ಕೋಲಾಟಗಳು ನಡೆದವು. ಮಾಜಿ ಎಪಿಎಂಸಿ ಸದಸ್ಯ ಅನ್ನಪೂರ್ಣ ಪ್ರಭಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಿ ಪಾಟೀಲ, ಪ್ರಯಾಗಬಾಯಿ ಪಾಟೀಲ, ಮಾನೇಬಾಯಿ ಪಾಟೀಲ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net