ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ

WhatsApp Image 2023-11-05 at 7.08.17 PM- 04
Published on

ಚಿತ್ರದುರ್ಗ: ನಗರದ ಜೈ ವಾಸವಿ ಮಿತ್ರವೃಂದದ 14ನೇ ವಾರ್ಷಿಕೋತ್ಸವ ಅಂಗವಾಗಿ,ಆರ‌್ಯವೈಶ್ಯ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಊರ ಹಬ್ಬ’ಹನ್ನೊಂದು ಶಕ್ತಿ ದೇವತೆಗಳ ಮೆರವಣಿಗೆ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.
ಮೇಲುದುರ್ಗದ ಶ್ರೀ ಏಕನಾಥೇಶ್ವರಿ, ಶ್ರೀ ರಾಜಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಶ್ರೀ ಕನ್ಯಕಾ ಪರಮೇಶ್ವರಿ,ಶ್ರೀ ಬರಗೇರಮ್ಮ, ಶ್ರೀ ಗೌರ ಸಂದ್ರಮಾರಮ್ಮ, ಶ್ರೀ ಕಾಳಿಕ ಮಠೇಶ್ವರಿ, ಶ್ರೀ ದುರ್ಗಾದೇವಿ, ಶ್ರೀ ಬುಡ್ಡಾಂಬಿಕದೇವಿ, ಶ್ರೀ ಬನಶಂಕರಿ, ಶ್ರೀ ಚೇಳುಗುಡ್ಡ ಗೌರಸಂದ್ರ ಮಾ ರಮ್ಮ ಹಾಗೂ ಶ್ರೀ ದೊಡ್ಡ ಮಾರಮ್ಮ ಅಮ್ಮನವರ ಮೆರವಣಿಗೆ ಸಿಹಿ ನೀರು ಹೊಂಡದಿಂದ ಕನ್ಯಕಾ ಪರಮೇಶ್ವರಿ ದೇವಾಲಯದವರೆಗೆ ನಡೆಯಿತು.
ಗಂಗಾ ಪೂಜೆ ಬಳಿಕ ಆರಂಭವಾದ ಮೆರವಣಿಗೆಗೆ ಜಾನಪದ ಕಲಾ ತಂಡಗಳು ಮೆರಗು ನೀಡಿದವು. ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮವನ್ನು ಆಯೋಜಿಸಲಾಗಿತ್ತು. ಪೂರ್ಣಾಹುತಿ,ಮಹಾಮಂಗಳಾರತಿ ಬಳಿಕ ಅನ್ನ ಸಂತರ್ಪಣೆ ನೆರವೇ ರಿತು.ಜೈವಾಸವಿ ಮಿತ್ರ ವಂದದ ಅಧ್ಯಕ್ಷ ಎಂ.ಕೆ.ವೆಂಕಟೇಶ್,ಆರ‌್ಯವೈಶ್ಯ ಸಂಘದ ಗೌರವಾಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ,ಅಧ್ಯಕ್ಷ ಎಲ್.ಇ.ಶ್ರೀನಿ ವಾಸ್, ಪ್ರಧಾನ ಕಾರ‌್ಯದರ್ಶಿ ನಾಗರಾಜ್,ಶಶಿಧರ್‌ಗುಪ್ತ, ಎಂ.ಎಚ್.ಪ್ರಾಣೇಶ್, ಬದ್ರಿನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net