ಮಳೆಗಾಗಿ ಪರ್ಜನ್ಯ ಹೋಮ

web4
ಯಲ್ಲಮ್ಮನಗುಡ್ಡದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಮಾಡಲಾಯಿತು. ಎಸ್‌ಪಿಬಿ.ಮಹೇಶ, ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಅರವಿಂದ ಸುತಗುಂಡಿ, ಅರವಿಂದ ಮಳಗೆ ಇತರರಿದ್ದರು.
Published on

ಉಗರಗೋಳ: ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಪರ್ಜನ್ಯ ಹೋಮ ಹಾಗೂ ಜಪ ಮಾಡಲಾಗಿದೆ ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ.ಮಹೇಶ ಹೇಳಿದರು.

ಸಮೀಪದ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಹಾಗೂ ಪರ್ಜನ್ಯ ಜಪ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿ, ತಾಯಿ ಯಲ್ಲಮ್ಮಳ ಆಶೀರ್ವಾದದಿಂದ ಉತ್ತಮ ಮಳೆ ಸುರಿದು ಸಮೃದ್ಧ ಬೆಳೆ ಬೆಳೆಯಲಿ ಎಂದರು. ಹೂಲಿ ಹಿರೇಮಠದ ವೇದಮೂರ್ತಿ ಅಜ್ಜಯ್ಯ ಶಾಸ್ತ್ರಿ ಪರ್ಜನ್ಯ ಹೋಮ ನೆರವೇರಿಸಿದರು. ಪರ್ಜನ್ಯ ಹೋಮ, ಜಪ ಆರಂಭವಾಗುತ್ತಿದ್ದಂತೆ ಮಳೆರಾಯನ ಆಗಮನವಾಯಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಹುಲಗೇಮ್ಮ ದೇವಸ್ಥಾನದ ಇಒ ಅರವಿಂದ ಸುತಗುಂಡಿ, ಅಭಿಯಂತರ ಎಂ.ವಿ.ಮುಳ್ಳೂರ, ಅಧೀಕ್ಷಕ ಅರವಿಂದ ಮಳಗೆ, ಆರ್.ಎಸ್.ಸವದತ್ತಿ, ಡಿ.ಆರ್.ಚವ್ಹಾಣ, ಸದಾನಂದ ಈಟಿ, ನ್ಯಾಮದೇವ ಹುಲಗಣ್ಣವರ, ವಿ.ಪಿ.ಸೋನ್ನದ, ಎಸ್.ಎಸ್. ನೇಸರಗಿ, ಪ್ರಭು ಹಂಜಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net