ಮಳೆಗಾಗಿ ದೇವಿ ಬೆಟ್ಟದಲ್ಲಿ ವಿಶೇಷ ಪೂಜೆ

27 kem 2
Published on

ಕೆಂಭಾವಿ: ಪಟ್ಟಣದ ರೈತರು ಮತ್ತು ಮುಸ್ಲಿಂ ಸಮುದಾಯದವರು ಪ್ರತಿ ವರ್ಷದ ವಾಡಿಕೆಯಂತೆ ಗ್ರಾಮ ದೇವತೆ ಹಜರತ್ ಜಚ್ಚಾ ಮಾಸಾಬಿ ಬೆಟ್ಟಕ್ಕೆ ತೆರಳಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದರು. ಕೆಂಭಾವಿ ಸೀಮೆಯಲ್ಲಿರುವ ಗ್ರಾಮ ದೇವತೆಗಳಾದ ಗುಡ್ಡದ ರಾಮಲಿಂಗೇಶ್ವರ ಹಾಗೂ ಬೆಟ್ಟದ ಮಾಸಾಬಿ ದೇವಿಗೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸುವುದು ಪ್ರತಿವರ್ಷದ ಸಂಪ್ರದಾಯ.

ಗುರುವಾರ ಪಟ್ಟಣದ ರೈತರು ಹಾಗೂ ಮುಸ್ಲಿಂ ಸಮುದಾಯದವರು ಹಿಂದು ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಹಜರತ್ ಜಚ್ಚಾ ಮಾಸಾಬಿ ಕುದುರೆಗಳಿಗೆ ವಿಶೇಷವಾಗಿ ಅಲಂಕಾರಗೊಳಿಸಿ ಸಕಲ ವಾದ್ಯ ಮೇಳಗಳೊಂದಿಗೆ ಪಟ್ಟಣದಿಂದ ಪಾದಯಾತ್ರೆ ಮೂಲಕ ಮಾಸಾಬಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವಿಗೆ ಮಳೆಗಾಗಿ ಪ್ರಾರ್ಥಿಸಲಾಯಿತು. ನಂತರ ಸಾಮೂಹಿಕ ಪ್ರಸಾದ ಸ್ವೀಕರಿಸಿ ಗ್ರಾಮಕ್ಕೆ ಮರಳಿದರು. ಇದನ್ನು ಮಾಸಾಬಿಯನ್ನು ಕರೆದುಕೊಂಡು ಬರುವುದು ಎಂದು ಕರೆಯಲಾಗುತ್ತದೆ.

ಶಾಹೀದ್ ಹುಸೇನ್ ಖಾಜಿ, ಮಜರುದ್ದೀನ್ ಖಾಜಿ, ಜಾಹೀರುದ್ದೀನ್ ಸಾಹೇಬ್, ಶಮೀಮ್ ಖಾಜಿ, ನಯ್ಯುಮ್ ಖಾಜಿ, ರಫೀಕ್ ಖಾಜಿ, ಅಜೀಜ್ ಖಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net