ಮಳೆ ಹಾನಿ ಪ್ರದೇಶಗಳಿಗೆ ಬೆಲ್ದಾಳೆ ಭೇಟಿ

IMG_20220716_132855
Published on

ಬೀದರ್: ದಕ್ಷಿಣ ಕ್ಷೇತ್ರದ ಚೌಳಿ, ಚೊಂಡಿ, ಕಮಠಾಣ ಇತರ ಗ್ರಾಮಗಳಿಗೆ ಶನಿವಾರ ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿದರು.

ಮನೆ ಕುಸಿತ ಹಾಗೂ ನೀರಿನಿಂದ ಜಲಾವೃತವಾದ ಹೊಲಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಮನೆ ಕುಸಿತ ಮತ್ತು ಬೆಳೆ ಹಾನಿ ಕುರಿತು ಜಿಲ್ಲಾಡಳಿತ, ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಚೌಳಿ ಗ್ರಾಪಂ ಅಧ್ಯಕ್ಷ ನಯುಮೊದ್ದೀನ್, ಪಿಡಿಒ ಶರತಕುಮಾರ್, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಾಜರಡ್ಡಿ ಶಾಬಾದ್, ಪ್ರಮುಖರಾದ ಸುರೇಶ ಮಾಶೆಟ್ಟಿ, ಚಂದ್ರಶೇಖರ ಪಾಟೀಲ್, ಓಂಕಾರ ಮಜಗೆ, ಅನೀಲ ಗುನ್ನಳ್ಳಿ, ಇಂದ್ರರಡ್ಡಿ, ಕಲ್ಯಾಣರಾವ ದೇಶಮುಖ, ಲಕ್ಷ್ಮಣ, ದೇವೀಂದ್ರ ಪಾಟೀಲ್, ಮಾಣಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net