

ಬೀದರ್: ಮಳೆಯಿಂದ ಹಾನಿಗೊಳಗಾದ ದಕ್ಷಿಣ ಕ್ಷೇತ್ರದ ವಿವಿಧೆಡೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಸಿಂದೋಲ್, ತಡಪಳ್ಳಿ ಇತರ ಗ್ರಾಮಗಳಿಗೆ ತೆರಳಿದ ಅವರು, ವಾರದಿಂದ ಸುರಿದ ಮಳೆಯಿಂದಾಗಿ ರಸ್ತೆ, ಚರಂಡಿ, ಸೇತುವೆ ಮತ್ತು ಮನೆ ಹಾನಿ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಆಲಿಸಿದರು.
ತಡಪಳ್ಳಿಯಲ್ಲಿ ಜನರ ಸಮಸ್ಯೆ ಆಲಿಸಿದ ಶಾಸಕರು, ನಂತರ ಸಿಂದೋಲ್-ಭಂಗೂರ ರಸ್ತೆಯ ಸೇತುವೆ ವೀಕ್ಷಿಸಿದರು. ಸ್ವಲ್ಪ ಮಳೆಯಾದರೂ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಎತ್ತರ ಹೆಚ್ಚಳ ಸಂಬಂಧ ಅಕಾರಿಗಳ ಜತೆ ಚಚರ್ಿಸುವೆ. ಈ ಹಿಂದೆ ಏನಾಗಿದೆ ಎಂಬುದು ಬೇಡ. ಈಗ ಸಮಸ್ಯೆ ಪರಿಶೀಲಿಸಿದ್ದು, ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟವಾಗಿದೆ. ಹಾನಿಯಾದ ಬೆಳೆ, ಮನೆ, ಮೂಲಸೌಲಭ್ಯ ಕುರಿತು ಮಾಹಿತಿ ಕಲೆ ಹಾಕಿ ನಷ್ಟದ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ ಇಇ ಭಗವಾನ ಸಿಂಗ್, ಪಿಡಿಒ ಸುನೀತಾ, ಪ್ರಮುಖರಾದ ಸುರೇಶ ಮಾಶೆಟ್ಟಿ, ಚಂದ್ರಶೇಖರ ಪಾಟೀಲ್ ಇತರರಿದ್ದರು