ಮಳೆ ಹಾನಿ ಗ್ರಾಮಗಳಿಗೆ ಭೇಟಿ, ಪರಿಶೀಲನೆ

Kamalapur
Published on

ಕಮಲಾಪುರ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಭೇಟಿ ನೀಡಿ ಪರಿಶೀಲಿಸಿದರು.
ಸಿರಗಾಪುರದಲ್ಲಿ ನಿರಾಶ್ರಿತರಿಗಾಗಿ ಆರಂಭಿಸಿದ ಗಂಜಿ ಕೇಂದ್ರದಲ್ಲಿ ಆಹಾರ ಸೇವನೆ ಮಾಡಿ ಗಮನಸೆಳೆದರು. ಅಲ್ಲದೆ ಗುಣಮಟ್ಟದ ಊಟ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಯಿಂದ ಹಾಳಾದ ಮನೆಗಳು, ಬೆಳೆ ಹಾನಿ ಬಗ್ಗೆ ಸಮಗ್ರ ವರದಿ ಪಡೆದರು. ಕಲ್ಲಹಂಗರಗಾ, ಜಂಬಗಾ, ಕುಮಸಿ, ಬನ್ನೂರು, ಅವರಾದ (ಬಿ), ಕಮಲಾಪುರ ತಾಲೂಕಿನ ಕುರಿಕೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಅಂಜುಮ್ ತಬಸ್ಸುಮ್, ಪ್ರಮುಖರಾದ ಜಗನ್ನಾಥ ಮಾಲಿಪಾಟೀಲ್, ಮಲ್ಲಿಕಾಜರ್ುನ ಹೀರಾಪುರ, ಕಲ್ಯಾಣರಾವ ಪಾಟೀಲ್, ಗಿರಿರಾಜ ಪಾಟೀಲ್, ಚನ್ನವೀರಪ್ಪ ಸಲಗರ್, ಮಲ್ಲಿಕಾಜರ್ುನ ನೀಲೂರ, ಶರಣಗೌಡ ಪಾಟೀಲ್, ಶಿವಕುಮಾರ ಪಾಟೀಲ್, ವೆಂಕಟೇಶ ಅಧೋನಿ, ಬಸವರಾಜ ಕಟ್ಟೋಳಿ, ಸಂಜಯಕುಮಾರ, ಶಿವಪುತ್ರಪ್ಪ ಹತಗುಂದಿ, ಸೋಮನಾಥ್ ಹತ್ತಿ, ಸೂರ್ಯಕಾಂತ ತೇಗನೂರ, ರಾಜು ವಾಲಿ, ಶಂಭು ಬಿಲಗುಂದಿ, ಚನ್ನವೀರ ಹಿರೇಮಠ ಇದ್ದರು.

ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ. ಈ ಕುರಿತು ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ವಾಸ್ತವ ಚಿತ್ರಣ ನೋಡಿದ್ದಾರೆ. ಮಳೆಯಿಂದ ಸಮಸ್ಯೆಗೆ ಒಳಗಾಗಿರುವವರಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡಲು ಸಕರ್ಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
| ಬಸವರಾಜ ಮತ್ತಿಮೂಡ, ಶಾಸಕ, ಗ್ರಾಮೀಣ ಮತಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net