

ಚಿತ್ರದುರ್ಗ: ಹಿಂಗಾರು ಮಳೆ ಅಬ್ಬರದಿಂದ ಜಿಲ್ಲೆಲ್ಲಿರು ಆಗಿರುವ ಹಾನಿ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾ ಗುವುದು,ಸಿಎಂ ಸಿದ್ದರಾಮಯ್ಯರ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿರಿಯೂರು ಎಪಿಎಂಸಿಗೆ ಶನಿವಾರ ಭೇಟಿ ನೀಡಿದ್ದಾಗ ಅಲ್ಲಿಯ ರೈತರು ಅನೇಕ ದೂರುಗಳನ್ನು ಹೇಳಿದ್ದಾರೆ. ಶೇಂಗಾ ಬೆಳೆ ಬೆಲೆ ಕುಸಿದಿದೆ. ಮಳೆಯಿಂದ ಬೆಳೆ,ಆಸ್ತಿಪಾಸ್ತಿ ನಷ್ಟದ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ವಿವಿಸಾಗರ ಮೊದಲಿದ್ದಂತೆ ಇರುತ್ತದೆ,ಯಾವುದೇ ಬದಲಾವಣೆಗೆ ಮುಂದಾಗುವುದಿಲ್ಲ. ಮುಡಾದಲ್ಲಿ ಯಾವುದೇ ಮಹತ್ವದ ದಾಖಲೆ ಗಳು ಸಿಕ್ಕಿಲ್ಲ.ಸಚಿವ ಭೈರತಿ ಸುರೇಶ್ ವಿರುದ್ಧದ ಕೇಂದ್ರ ಸಚಿವೆ ಶೋಭಕರಂದ್ಲಾಜೆ ಹೇಳಿಕೆ ಅಲ್ಲಗಳೆದರು. ಮಾಜಿ ಡಿ.ಕೆ.ಸುರೇಶ್ ಚನ್ನಪಟ್ಟ ಣದಿಂದ ಸ್ಪರ್ಧಿಸುವ ಕುರಿತಂತೆ ಸಿಎಂ,ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ ನಿರ್ಧರಸ ಬೇಕಾಗುತ್ತದೆ ಎಂದರು. ಮಾಜಿ ಸಿಎಂ ಬಸವ ರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ,ಜೆಡಿಎಸ್ ಏನು ಮಾಡುತ್ತದೆಯೋ ನೋಡಬೇಕೆಂದರು.