

ಬಾಗಲಕೋಟೆ: ಸಮಿಪದ ಮುರನಾಳ ಪುನರ್ವಸತಿ ಕೇಂದ್ರದಲ್ಲಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಶೃದ್ಧಾ ಭಕ್ತಿಯಿಂದ ಆಚರಿಸಿದರು.
ಮಕಾನಗಳಲ್ಲಿ ದೇವರುಗಳನ್ನು ಬಟ್ಟೆಗಳಿಂದ ಸಿಂಗರಸಿ ಪ್ರತಿಷ್ಠಾಪಿಸಲಾಗಿತ್ತು, ಅವುಗಳಲ್ಲಿ ಹಸ್ತದ ಪಂಜಾಗಳು, ಡೋಲಿಗಳು,ಪ್ರಮುಖವಾಗಿದ್ದವು, ಸಮಸ್ತ ಜನಾಂಗದ ಜನರು ಅಲಾಯಿ ದೇವರುಗಳ ದರ್ಶನವನ್ನು ಪಡೆದು, ಸಕ್ಕರೆ ನೈವೇದ್ಯ ಮಾಡಿ ಕಾಣಿಕೆಗಳನ್ನು ಸಮರ್ಪಿಸಿದರು.
ಮೊಹರಂ ಕೊನೆಯ ದಿನವಾದ ಬುಧವಾರ ಬೆಳಿಗ್ಗೆ ದೇವರುಗಳಿಗೆ ಹೂ ಕಟ್ಟಿ ವಿಶೇಷ ಪೂಜೆ ಸಲ್ಲಿಸಿ ನಂತರ ಬೆಂಕಿಯ ಹಾಯ್ದು ಗ್ರಾಮದ ಅಗಸಿಯಲ್ಲಿ ಹಿರೆಮಸುತಿಯಲ್ಲಿನ ದೇವರುಗಳು ಹಾಗೂ ಪಿಂಜಾರ ಮಸುತಿಯಲ್ಲಿ ದೇವರುಗಳು ಪರಸ್ಪರ ಬೇಟಿಯಾಗಿ ಗ್ರಾಮದಲ್ಲಿರುವ ಶ್ರೀ ಮಳೆರಾಜೇಂದ್ರಸ್ವಾಮಿ ಮಠಕ್ಕೆ, ಗ್ರಾಮದೇವಿ ದೇವಸ್ಥಾನ, ಶ್ರೀ ಈಶ್ವರ ಹಾಗೂ ಮಾರುತಿ ದೇವಸ್ಥಾನ ನಂತರ ಬಸವೇಶ್ವರ ಮತ್ತು ಬೀರಲೆಂಗೇಶ್ವರ ದೇವಸ್ಥಾನಕ್ಕೆ ತೆರಳಿ ಬೇಟಿನೀಡಿದವು, ಮರಳಿ ಹಿರೇ ಮಸೂತಿಗೆ ಆಗಮಿಸಿದ ದೇವರುಗಳು ಅಲ್ಲಿ ಹಾಗೂ ಹೋಗುಗಳ ಬಗ್ಗೆ ಪ್ರಶ್ನೇ ಹೇಳಿಕೆಗಳು ನಡೆದವು.ನಂತರ ಹಿರೇ ಮಸೂತಿಯ ಪ್ರವೇಶಕ್ಕೂ ಮುನ್ನ ನೀರು ತುಂಬಿಟ್ಟಿದ್ದ ಐದು ತಂಬಿಗಳಲ್ಲಿ ಅವುಗಳಲ್ಲಿ ಮನಸ್ಸಿಗ್ಗೆ ಬಂದ ತಂಬಿಗೆ ಹಿಡಿದು ನೀರು ಚೆಲ್ಲುವ,ಚಿಮ್ಮುವ,ಮೂಲಕ ವರ್ಷದ ಮಳೆ ಸೂಚನೆ ನೀಡಿದ್ದು ವಿಶೇಷವಾಗಿತ್ತು.
ಸಂಜೆ ದೇವರುಗಳು ಗ್ರಾಮದಲ್ಲಿನ ಭಕ್ತರ ಮನೆಗೆ ಬೇಟಿ ನೀಡಿದ ನಂತರ ಹಿರೇ ಮಸೂತಿ ಹಾಗೂ ಪಿಂಜಾರ ಮಸೂತಿ ದೇವರುಗಳು ಗ್ರಾಮದ ಅಗಸಿಯಲ್ಲಿ ಪರಸ್ಪರ ಬೇಟಿಮಾಡಿ ನಂತರ ನದಿಗೆ ತೆರಳಿದವು.
ಗ್ರಾಮದ ಹುತಾಲಸಾಬ ವಾಲಿಕಾರ, ಮೌಲಾಸಾಬಾ ವಾಲಿಕಾರ, ಮೆಹಬೂಬಸಾಬ ವಾಲಿಕಾರ, ರಮಜಾನ ಸಾಬ ವಾಲಿಕಾರ, ಡೊಂಗ್ರಿಸಾಬ ವಾಲಿಕಾರ,ಹುಶೇನಸಾಬ ರೊಳ್ಳಿ, ಪತ್ತೆಸಾಬ ವಾಲಿಕಾರಮ ಬಾಬುಸಾಬ ವಾಲಿಕಾರ, ಮಳಿಯಪ್ಪ ಹೊರಕೇರಿ,ಹನಮಂತ ಜಮ್ಮನಕಟ್ಟಿ, ಗದಿಗೆಪ್ಪ ಕರಮುದಿ,ಚಂದ್ರು ಮಾದರ, ಜಗದೀಶ ಮರನಾಳ, ಪ್ರಕಾಶ ಬಿಸಾಳಿ, ಚೆನ್ನಬಸಪ್ಪ ಯಂಕಂಚಿ, ಮಳಿಯಪ್ಪಮಾಸ್ತರ ತೆಗ್ಗಿ,ಸಿದ್ದಪ್ಪ ಮುಚಖಂಡಿ.ಸಿದ್ದು ಕೊಂಡಗೂಳಿ, ಈರಪ್ಪ ಶಿರೂರ, ಸೇರಿದಂತೆ ಅನೇಕರು ಇದ್ದರು.