ಮಳೆ: ಬೆಳೆನಷ್ಟಕ್ಕೆ ಶೀಘ್ರ ಪರಿಹಾರ ಒದಗಿಸಿ

web gggg
Published on

ಸಾಗರ: ಸಾಗರ, ಸೊರಬ, ಹೊಸನಗರ ತಾಲೂಕುಗಳಲ್ಲಿ ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾಳಾಗಿದ್ದು ಶೀಘ್ರ ಪರಿಹಾರ ಒದಗಿಸಬೇಕೆಂದು ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್) ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಭತ್ತ, ಜೋಳ ಬೆಳೆ ಸಂಪೂರ್ಣ ನಶಿಸಿದೆ. ಅಡಕೆಗೆ ಕೊಳೆ ಮತ್ತು ಎಲೆಚುಕ್ಕೆ ರೋಗ ಬಾಧಿಸುತ್ತಿದ್ದು, ಮರಗಳೇ ನಾಶವಾಗುವ ಭೀತಿಯಿದೆ. ಎಷ್ಟೋ ಕಡೆ ಧರೆಕುಸಿದು ತೋಟ, ಗದ್ದೆಗಳು ಧ್ವಂಸವಾಗಿವೆ. ಸರ್ಕಾರ ವಿಳಂಬ ಮಾಡದೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net