ಮಳೆ-ಬೆಳೆಗೆ ಪ್ರಾರ್ಥಿಸಿ ವಿಶೇಷ ಪೂಜೆ

Ucchhanagi Yallamma Devi
Published on

ಚಿತ್ರದುರ್ಗ: ನವರಾತ್ರಿ ಮಹೋತ್ಸವದ ಮೂರನೇ ದಿನ ಮಂಗಳವಾರ ದುರ್ಗಾ ಮಾತೆ ಸ್ವರೂಪಳಾದ ಚಂದ್ರಘಂಟಾ ದೇವಿ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ಹೋಮ ಹವನಗಳೊಂದಿಗೆ ಪೂಜಿಸಲಾಯಿತು. ಮುಂಬರುವ ದಿನಗಳಲ್ಲಿ ನಾಡಿನಾದ್ಯಂತ ಉತ್ತಮ ಮಳೆ-ಬೆಳೆಯಾಗಲೆಂದು ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿತು.

ನಗರದ ಕೋಟೆ ರಸ್ತೆಯ ಉಚ್ಚಂಗಿಯಲ್ಲಮ್ಮ ದೇವಿಗೆ ನೂರಾರು ನವಿಲು ಗರಿಗಳಿಂದ ಅಲಂಕರಿಸಲಾಗಿತ್ತು. ಮೇಲುದುರ್ಗದ ಏಕನಾಥೇಶ್ವರಿ, ನಗರ ಪೊಲೀಸ್‌ಠಾಣೆ ಆವರಣದ ಕಣಿವೆಮಾರಮ್ಮ, ಜೋಗಿಮಟ್ಟಿ ರಸ್ತೆಯ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಕಾಳಿಕಾದೇವಿ, ದಂಡಿನ ಕುರುಬರ ಹಟ್ಟಿಯ ಗಡಿಚೋಡು ಮಾರಮ್ಮ ಸೇರಿ ಹಲವು ದೇಗುಲಗಳಲ್ಲಿ ದೇವಿ ಮೂರ್ತಿಯನ್ನು ಭಕ್ತರ ಕಣ್ಮನ ಸೆಳೆಯುವಂತೆ ಪುಷ್ಪ, ಇತರ ವಸ್ತುಗಳಿಂದ ಸಿಂಗರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net