ಮಳೆ ನೀರು ಸಂಗ್ರಹಕ್ಕಾಗಿ ಕೆರೆ ಹೂಳೆತ್ತುವಿಕೆ ಅಗತ್ಯ

PHOTO-3--03
Published on

ಚಿತ್ರದುರ್ಗ: ಭೂಮಿಯಿಂದ ಶೇ.80 ಪ್ರಮಾಣದಲ್ಲಿ ಈಗಾಗಲೇ ನೀರನ್ನು ಹೊರ ತೆಗೆದಿದ್ದೇವೆ ಎಂದು ಅಂತರ್ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಗರದ ವೈ.ಆರ್.ಆದಿಶೇಷ ರೋಟರಿ ಬಾಲಭವನದಲ್ಲಿ ಶುಕ್ರ ವಾರ ಏರ್ಪಡಿಸಿದ್ದ ಕೆರೆ ಸಮಿತಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು,ಭೂಮಿಯಲ್ಲಿ ಈಗ ಶೇ.20 ಪ್ರಮಾಣದಲ್ಲಿ ಉಳಿದಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳ ಹೂಳೆತ್ತಲಾಗುತ್ತಿದೆ. ಇದರಿಂದ ಮಳೆ ನೀರು ಸಂಗ್ರಹದೊಂದಿಗೆ ಕೃಷಿಭೂಮಿಗೆ ಫಲವತ್ತಾದ ಮಣ್ಣು ಸಿಗುತ್ತದೆ ಎಂದರು. ಯೋಜನೆ ಶು ದ್ಧ ಗಂಗಾ ವಿಭಾಗದ ಕೇಂದ್ರ ಕಚೇರಿ ನಿರ್ದೇಶಕ ಶಿವಾನಂದ ಆಚಾರ್ಯ ಮಾತನಾಡಿ,ಬೋರ್‌ವೆಲ್‌ಗಳೆಡೆ ಗಮನ ಹೆಚ್ಚಾಗಿ ಕೆರೆಗಳು ಒ ಣಗುತ್ತಿವೆ. ರಾಜ್ಯದಲ್ಲಿ ಅಂದಾಜು 36 ಸಾವಿರ ಕೆರೆಗಳಿದ್ದು,ಅನೇಕ ಕಡೆ ಒತ್ತುವರಿಯಾಗುತ್ತಿವೆ.
ಐದಾರು ವರ್ಷಗಳಲ್ಲಿ ಯೋಜನೆ ಯಿಂದ ಕೆರೆಗಳ ಹೂಳೆತ್ತಲು 42 ಕೋಟಿ ರೂ. ಖರ್ಚು ಮಾಡಲಾಗಿದೆ. ರೈತರ ಜೀವಾಳ ಕೆರೆಗ ಳನ್ನು ಉಳಿಸುವತ್ತ ಕೆರೆ ಸಮಿತಿ ಪದಾಧಿ ಕಾರಿಗಳು ಗಮನ ಕೊಡಬೇಕೆಂದರು. ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ,ಜಿಲ್ಲಾ ನಿ ರ್ದೇಶಕ ದಿನೇಶ್‌ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net