

ಚಿತ್ರದುರ್ಗ: ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಬಲ ಸಂಪನ್ಮೂಲ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಚಿತ್ರದುರ್ಗ ತಾಲೂಕು ಯಳಗೋಡು ಗ್ರಾಪಂನಲ್ಲಿ ಮಳೆ ನೀರು ಕೊಯ್ಲು, ಬೂದು ನೀರು ನಿರ್ವಹಣೆ ಕುರಿತು ತರಬೇತಿ ಏರ್ಪಡಿಸಲಾಗಿತ್ತು. ಗ್ರಾಪಂ ಅಧ್ಯಕ್ಷೆ ಅನಿತಾ ನಾಗರಾಜ್, ಪಿಡಿಒ ಎಂ.ಆರ್. ಪ್ರಹ್ಲಾದಕುಮಾರ್, ಸದಸ್ಯರಾದ ಬಸವರಾಜಪ್ಪ, ರುದ್ರೇಶ್, ಶಾಂತಕುಮಾರ್, ಪಾಲಯ್ಯ, ರೂಪಾ, ಜಲಜೀವನ್ ಮಿಷನ್ ಯೋಜನೆ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್. ನಾಡರ್, ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಸ್. ನಾಗರಾಜ್, ಗುರುಮೂರ್ತಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಇತರರು ಇದ್ದರು.