

ಕೆಂಭಾವಿ: ಒಂದು ವಾರದಿಂದ ಬಿಸಿಲಿನಿಂದ ಕಾಯ್ದು ಕೆಂಡದಂತಾಗಿದ್ದ ಭೂಮಿಗೆ ಭಾನುವಾರ ಮತ್ತು ಸತತವಾಗಿ ಸುರಿದ ಮಳೆಯಿಂದ ಭೂಮಿ ತಂಪಾಗಿರುವುದಲ್ಲದೇ ರೈತರ ಮುಖದಲ್ಲಿ ಮಂದಹಾಸ ತರಿಸಿದೆ.
ಬೇಸಿಗೆ ಬಿಸಿಲ ಪ್ರಖರತೆಗೂ ಮೀರಿದ ಅತಿ ಬಿಸಿಲಿನಿಂದ ಬೆಳೆಗಳು ಸಂಪೂರ್ಣ ಬಾಡುವ ಹಂತಕ್ಕೆ ತಲುಪಿದ್ದವು. ಭಾನುವಾರ ರಾತ್ರಿಯಿಂದ ಆರಂಭವಾದ ನಿರಂತರ ಮಳೆ ಸೋಮವಾರವೂ ಮುಂದುವರಿದಿದ್ದು, ೨೪ಗಂಟೆಯಲ್ಲಿ ಒಟ್ಟು ೩೨ ಮಿಮೀ ಮಳೆಯಾಗಿದೆ.
ಸತತ ಮಳೆಯಿಂದ ವಲಯದಲ್ಲಿ ಯಾವುದೇ ಹಾನಿ ಸಂಭವಿಸಲ್ಲ. ಆದರೂ ಕೆಲ ಜಮೀನುಗಳಲ್ಲಿ ನೀರು ನಿಂತಿದ್ದು, ನೀರನ್ನು ಹೊರಹಾಕಲು ರೈತರು ಹರಸಾಹಸ ಪಡುವಂತಾಗಿದೆ. ನಿರಂತರ ಮಳೆ ಮಧ್ಯೆ ಸೋಮವಾರ ಪಟ್ಟಣದಲ್ಲಿ ವಾರದ ಸಂತೆ ಕೂಡ ಜೋರಾಗಿತ್ತು.