ಮಳೆ ನಿಂತರು ತಗ್ಗದ ಪ್ರವಾಹ ಪರಿಸ್ಥಿತಿ

IMG-20250822-WA0045
Published on

ಮಳೆ ನಿಂತರು ತಗ್ಗದ ಪ್ರವಾಹ ಪರಿಸ್ಥಿತಿ

| ಕೃಷ್ಣಾ ನದಿಗೆ ೨.೫೨ ಲಕ್ಷ ಕ್ಯೂಸೆಕ್ ನೀರು

| ಮುಂದುವರೆದ `ಮಹಾ` ಆತಂಕ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಮಹಾರಾಷ್ಟç ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಮಳೆ ಅಬ್ಬರ ತಣ್ಣಗಾಗಿದೆ. ಆದರೆ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ  ಚಿಕ್ಕೋಡಿ ಉಪ ವಿಭಾಗದ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕ್ಷೀಣಿಸಿದೆ. ಆದರೆ ೧೦೫ ಟಿಎಂಸಿ ಸಾಮರ್ಥ್ಯದ ಮಹಾರಾಷ್ಟçದ ಕೊಯ್ನಾ ಜಲಾಶಯ ನಿರಂತರ ಮಳೆಯಿಂದಾಗಿ ೯೯ ಟಿಎಂಸಿ ಭರ್ತಿಯಾದ ಹಿನ್ನಲೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಜಿಲ್ಲೆಯ ಚಿಕ್ಕೋಡಿ,ಅಥಣಿ,ರಾಯಬಾಗ ಮತ್ತು ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷ್ಣಾಗೆ ೨.೫೨ ಲಕ್ಷ ಕ್ಯೂಸೆಕ್ ನೀರು:

ಮಹಾರಾಷ್ಟçದ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ೨ ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು ೨.೫೨ ಲಕ್ಷ ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಇದರಿಂದ ಕೃಷ್ಣಾ ತೀರದ ಗ್ರಾಮಗಳಲ್ಲಿ ನದಿ ನೀರು ಪ್ರವಾಹ ಸೃಷ್ಟಿಸುತ್ತಿದೆ.ದೂಧಗಂಗಾ ನದಿ ನೀರು ಧಿಡೀರ್‌ಹೆಚ್ಚಳದಿಂದ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದಲ್ಲಿ ಪ್ರವಾಹ ಉಂಟಾಗಿದ್ದು, ೧೩೭ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ, ಇಂಗಳಿ, ಬಾವನಸೌಂದತ್ತಿ ಗ್ರಾಮದ ನದಿ ದಡದ ಮನೆಗಳಿಗೆ ನೀರು ನುಗ್ಗಿದೆ. ಜನ ಜಾನುವಾರಗಳೋಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಾಲೂಕು ಆಡಳಿತ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net