ಮಳೆ, ಗಾಳಿಗೆ ಉರುಳಿ ಬಿದ್ದ ಮರ

7bkl1 (2)
Published on

ಭಟ್ಕಳ: ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ಸುರಿದ ಭಾರಿ ಗಾಳಿ- ಮಳೆಗೆ ಮರವೊಂದು ಉರುಳಿ ಬಿದ್ದು ಸಂಬಾವ್ಯ ಅನಾಹುತ ತಪ್ಪಿದೆ.

ಪಟ್ಟಣದ ಗಜಾನನ ಸ್ಟ್ರೀಟ್​ನಲ್ಲಿರುವ ವೀರವಿಠ್ಠಲ ದೇವಸ್ಥಾನದ ಆವರಣದಲ್ಲಿ ಅನಿಲ್ ಭಟ್ ಎಂಬುವವರಿಗೆ ಸೇರಿದ ಮನೆಯ ಮೇಲೆ ಸಿಡಿಲು ಬಡಿದು ಮರ ಬಿದ್ದಿದೆ. ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್ ವಿ.ಪಿ. ಕೋಟ್ರಳ್ಳಿ, ವಿ.ಎ. ಶಂಭು ಸಿ., ಬೇಟಿ ನೀಡಿ ಪರಿಶೀಲನೆ ನಡೆಸಿದರು. ಮರ ಬಿದ್ದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಹೆಸ್ಕಾಂ ಇಲಾಖೆಯ ಎಇಇ ಮಂಜುನಾಥ ಮತ್ತು ಅವರ ತಂಡ ಭೇಟಿ ನೀಡಿ ಹಾನಿಯಾಗಿರುವ ಕಂಬವನ್ನು ಬದಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net