ಮಳೆ ಅವಾಂತರ ಪರಿಹಾರಕ್ಕೆ ಸೇತುವೆ ನಿರ್ಮಾಣ, ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲಿಸಿದ ಶಾಸಕ ಶ್ರೀನಿವಾಸಮೂರ್ತಿ

17 Nela Ph 02 MLA Visit
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ವಸತಿ ಬಡಾವಣೆಗಳು ಮಳೆಗಾಲದಲ್ಲಿ ಜಲಾವೃತಗೊಂಡು ಅವಾಂತರ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ವಿವಿಧೆಡೆ ನೂತನ ಸೇತುವೆ ನಿರ್ಮಿಸಲು ಅಧಿಕಾರಿಗಳ ತಂಡದೊಂದಿಗೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಂಗಳವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದರು.


ನಗರಸಭೆ ವ್ಯಾಪ್ತಿಯ ಜನಪ್ರಿಯ ಅಪಾರ್ಟ್‌ಮೆಂಟ್, ಚನ್ನಪ್ಪ ಬಡಾವಣೆ ಬಳಿಯ ಭಕ್ತಪಾಳ್ಯ ಮುಖ್ಯರಸ್ತೆ, ವಾಜರಹಳ್ಳಿ ರಸ್ತೆ, ಎಂಜಿ.ರಸ್ತೆ ಸೇರಿ ಹಿಪ್ಪೆ ಆಂಜನೇಯಸ್ವಾಮಿ ಬಡಾವಣೆ ಬಳಿಯ ಬೆತ್ತನಗೆರೆ ಮುಖ್ಯರಸ್ತೆ ರಾಜಕಾಲುವೆಯ ಸ್ಥಳ ಪರಿಶೀಲನೆ ನಡೆಸಿದರು.


ಇತ್ತೀಚೆಗೆ ಮಳೆಯ ಪ್ರಮಾಣ ಹೆಚ್ಚಾಗಿದ್ದು, ನಗರದ ಕೆರೆ ತುಂಬಿ ಹರಿದಾಗ ರಾಜಕಾಲುವೆಗಳಲ್ಲಿನ ಇಕ್ಕೆಲಗಳಲ್ಲಿರುವ ವಸತಿ ಬಡಾವಣೆಗಳು ಜಲಾವೃತಗೊಂಡು ಅವಾಂತರಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ನಾಗರಿಕರು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದರು. ಆದ್ದರಿಂದ ಶಾಸಕರ ವಿಶೇಷ ಅನುದಾನ 5 ಕೋಟಿ ರೂ. ವೆಚ್ಚದಲ್ಲಿ ಸೇತುವೆಗಳ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ರಾಜಕಾಲುವೆ ಒತ್ತುವರಿ ತೆರವು: ರಾಜಕಾಲುವೆ ಸ್ವಚ್ಛತೆ ಮಾಡುವ ಜತೆಗೆ ನಗರದ ಕೆಲ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಯಾಗಿದ್ದು, ಅದನ್ನು ಸರ್ವೇ ಮಾಡಿಸಿ, ಒತ್ತುವರಿ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಗೊಳಿಸಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.
ನಗರಸಭೆ ಹೆಚ್ಚುವರಿ ಸದಸ್ಯ ಆಂಜನಮೂರ್ತಿ, ನಾಮನಿರ್ದೇಶಿತ ಸದಸ್ಯ ಕೆ.ವಸಂತ್, ನಗರಸಭೆ ಇಂಜಿನಿಯರ್ ಗಜೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜಮ್ಮ, ಮುಖಂಡರಾದ ನಾರಾಯಾಣ್‌ರಾವ್, ಚಂದ್ರಕುಮಾರ್, ಕಪಾಲಿ ವೆಂಕಟೇಶ್, ಲೋಕೇಶ್‌ಗೌಡ, ಯಶವಂತ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net