ಮಳೆ ಅಬ್ಬರಕ್ಕೆ ಜನಜೀವನ ತತ್ತರ

bhr rain
ಬಾಳೆಹೊನ್ನೂರಿನಲ್ಲಿ ಧಾರಾಕಾರ ಮಳೆಯಾಗುತ್ತಿರುವಾಗ ಕಂಡುಬಂದ ದೃಶ್ಯ.
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆಯಿಂದ ಆರಿದ್ರಾ ಮಳೆ ಅಬ್ಬರ ಹೆಚ್ಚಾಗಿ ಜನಜೀವನ ತತ್ತರಗೊಂಡಿತು.

ಬುಧವಾರ ಸಂಜೆ ಆರು ಗಂಟೆ ಬಳಿಕ ಆರಂಭಗೊಂಡ ಮಳೆ ರಾತ್ರಿಯಿಡೀ ಸುರಿದಿದ್ದು, ಗುರುವಾರ ಮಧ್ಯಾಹ್ನದವರೆಗೂ ನಿರಂತರವಾಗಿತ್ತು. ಮಳೆಯೊಂದಿಗೆ ಗಾಳಿ ರಭಸವೂ ಹೆಚ್ಚಾಗಿತ್ತು. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಿರಂತರ ಮಳೆಯಿಂದ ಭದ್ರಾ ನದಿ, ಅದರ ಉಪನದಿಗಳಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಭದ್ರಾ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿತ್ತು. ಮಳೆ ಹೆಚ್ಚಾಗುತ್ತಿರುವ ಪರಿಣಾಮ ಅಧಿಕಾರಿಗಳು ಪ್ರವಾಹ ಉಂಟಾಗುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಮಳೆ ಹೆಚ್ಚಾಗಿದ್ದ ಕಾರಣ ಗುರುವಾರ ಮಧ್ಯಾಹ್ನ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಯಿತು. ಪಟ್ಟಣದಲ್ಲಿ ವ್ಯಾಪಾರ ಕುಂಠಿತಗೊಂಡಿದ್ದು, ಜನ ಓಡಾಟ ವಿರಳವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net