ಮಳೆ ಅಬ್ಬರ ಕಡಿಮೆಯಾಗಲೆಂದು ಪ್ರಾರ್ಥನೆ

IMG_20220910_133151
Published on

ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಕಡಿಮೆಯಾಗಲಿ ಎಂದು ಪ್ರಾರ್ಥಿಸಿ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಮಳೆಯಾಗಿ ರೈತರಿಗೆ ಬೆಳೆ ಹಾನಿಯಾಗಿದೆ. ಮುಂಬರುವ ದಿನಗಳಲ್ಲಿ ದೇವರ ಆಶೀರ್ವಾದದಿಂದ ಮಳೆ ಪ್ರಮಾಣ ಕಡಿಮೆಯಾಗಿ ಉತ್ತಮ ಬೆಳೆ ಫಸಲು ರೈತರಿಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಪವಿತ್ರೋತ್ಸವದ ಅಂಗವಾಗಿ ದೇವಾಲಯದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಸೌಮ್ಯ ಚೆನ್ನಕೇಶವಸ್ವಾಮಿ, ವೇಣುಗೋಪಾಲಸ್ವಾಮಿ ದೇವರಿಗೆ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ ಹಾಗೂ ದೋಷ ಪರಿಹಾರಕ್ಕಾಗಿ ಹೋಮ- ಹವನ, ಧಾರ್ಮಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದ ನಡೆಯಿತು. ಕನ್ನಡ ಸಂಸ್ಕೃತ ಪಂಡಿತ್ ನರಸಿಂಹನ್, ಮುಖ್ಯಅರ್ಚಕ ರಾಮಸ್ವಾಮಿ ಭಟ್, ಜಗನ್ನಾಥ್ ಪ್ರಸನ್ನ ಕೇಶವಾಚಾರ್, ಜೆಡಿಎಸ್ ಯುವ ಮುಖಂಡ ಜಯದೀಪ್ ಬಾಲಕೃಷ್ಣ, ಬಿ.ಆರ್.ದೊರೆಸ್ವಾಮಿ, ತೋಟಿ ನಾಗರಾಜ್, ಎನ್. ಎಸ್. ಪ್ರಕಾಶ್, ಮಾವಿನಹಳ್ಳಿ ಸುರೇಶ್, ಶಿವಕುಮಾರ್, ಹೊನ್ನೇಗೌಡ, ಕಾರೆಕೆರೆ ಕುಮಾರ್, ಎನ್.ನಾಗರಾಜು ಇತರರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net