ಮಳಿಗೆಗಳಿಗೆ ಬೀಗ ಹಾಕಲು ಮುಂದಾದ ಪಪಂ

Published on

ಬಾಡಿಗೆ ಬಾಕಿಯ ನಿಖರವಾದ ಮಾಹಿತಿ ಇಲ್ಲ ಪಾವತಿಸಿದ್ದರೂ ಎಂಟ್ರಿ ಮಾಡಿಕೊಳ್ಳದೆ ರ್ನಿಲಕ್ಷ$್ಯ

ಹುಳಿಯಾರು: ವರ್ಷಕ್ಕೆ ಎರಡ್ಮೂರು ಬಾರಿ ಹುಳಿಯಾರು ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ವಿಚಾರ ಮುನ್ನೆಲೆಗೆ ಬರುತ್ತದೆ. ಕಳೆದ ವರ್ಷ ಹರಾಜು ಹಾಕುವ ನೆಪವೊಡಿ ಏಕಾಏಕಿ ಮಳಿಗೆಗಳಿಗೆ ಬೀಗ ಹಾಕಿ ಮರುದಿನವೇ ಹಾಕಿದ್ದ ಬೀಗವನ್ನು ಪಂಚಾಯಿತಿ ಅಧಿಕಾರಿಗಳೇ ತೆಗೆದು ಸುದ್ದಿಯಾಗಿತ್ತು. ಐದಾರು ತಿಂಗಳ ಹಿಂದಷ್ಟೆ ಕೆಲ ಮಳಿಗೆಗಳನ್ನು ದುರಸ್ತಿ ಮಾಡುವ ನಿಟ್ಟಿನಲ್ಲಿ ತೆರವು ಮಾಡುವಂತೆ ನೋಟಿಸ್​ ನೀಡಿ ಸುದ್ದಿಯಾಗಿತ್ತು. ಈಗ ಬಾಡಿಗೆ ಬಾಕಿ ವಸೂಲಿಗೆಬೀಗ ಸಮೇತ ಬಂದು ಮತ್ತೊಮ್ಮೆ ಸುದ್ದಿಯಾಗಿದೆ.

ಪಪಂ ಮುಖ್ಯಾಧಿಕಾರಿ ನಾಗಭೂಷಣ್​ ಹಾಗೂ ಆರ್​ಐ ಶ್ರುತಿ ಬನಾರ ಅವರ ನೇತೃತ್ವದಲ್ಲಿ ಬೀಗಗಳ ಸಮೇತ ಪೌರಕಾರ್ಮಿಕರು ದಂಡು ಕರೆದುಕೊಂಡು ಬುಧವಾರ ಬೆಳಗ್ಗೆಯಿಂದಲೇ ಬಾಡಿಗೆ ವಸೂಲಿಗೆ ಮುಂದಾಗಿತ್ತು. ಮಳಿಗೆಗಳನ್ನು ಪಡೆದು ವ್ಯಾಪಾರ ವಹಿವಾಟು ಮಾಡಿ ಅನುಕೂಲ ಮಾಡಿಕೊಂಡಿರುವ ಬಾಡಿಗೆದಾರರೇ ಸ್ವಯಂ ಪ್ರೇರಣೆಯಿಂದ ಬಾಡಿಗೆ ಕಟ್ಟಬೇಕು. ಆದರೆ ಸಿಬ್ಬಂದಿಯೇ ಎಷ್ಟು ಬಾರಿ ಅಲೆದರೂ ಬಾಡಿಗೆ ಕಟ್ಟದೆ ಸತಾಯಿಸುತ್ತಿದ್ದಾರೆ. ಕೆಲವರದ್ದು ಮೂರ್ನಲ್ಕು ವರ್ಷಗಳಿಂದ ಬಾಕಿ ಇದೆ ಎಂದು ಆರೋಪಿಸಿ ಬಾಡಿಗೆ ಕೊಡಿ ಇಲ್ಲವಾದಲ್ಲಿ ಬೀಗ ಹಾಕುತ್ತೇವೆಂದು ಎಚ್ಚರಿಸಿದರು. ಇದಕ್ಕೆ ಬಾಡಿಗೆದಾರು ಆಕ್ಷೇಪ ವ್ಯಕ್ತಪಡಿಸಿ. ಬಾಡಿಗೆ ಕಟ್ಟಿಸಿಕೊಳ್ಳಲು ಬರುವ ನಿಮ್ಮ ಸಿಬ್ಬಂದಿ ಬಳಿ ಮಳಿಗೆಗಳ ಬಾಡಿಗೆ ಬಾಕಿಯ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಅಲ್ಲದೆ ಈ ಹಿಂದೆ ನಾವು ಕಟ್ಟಿದ ಬಾಡಿಗೆ ಪುಸ್ತಕದಲ್ಲಿ ಜಮೆ ಆಗಿಲ್ಲ.

ಮೂರ್ನಲ್ಕು ವರ್ಷದ್ದು ಬಾಕಿ ಇದೆ ಎಂದು ಚೀಟಿಯಲ್ಲಿ ಬರೆದುಕೊಡುತ್ತಾರೆ. ನಾವು ಈ ವರ್ಷ ಇಷ್ಟು ಹಣ ಕಟ್ಟಿದ್ದೇವೆಂದರೆ ರಸೀದಿ ನೀಡಿ ಎಂದು ನಮ್ಮನ್ನೇ ಕೇಳುತ್ತಾರೆ. ರಸೀದಿ ಕೊಟ್ಟರೆ ಜಮೆ ಮಾಡಿಕೊಂಡು ಉಳಿದಿದನ್ನು ಕೊಡಿ ಎನ್ನುತ್ತಾರೆ. ಹಾಗಾದರೇ ರಸೀದಿ ಕಳೆದುಕೊಂಡವರ ಪಾಡೇನು ಎಂದು ಪ್ರಶ್ನಿಸಿ, ನಿಮ್ಮ ಮೇಲಧಿಕಾರಿಗಳನ್ನು ಕರೆದುಕೊಂಡು ಬಾ ಎಂದು ಕಳಿಸಿದ್ದೇವೆ. ಅಲ್ಲದೆ ಆರ್​ಐ ಮೇಡಂಗೆ ಡಿಸಿಬಿ ಪುಸ್ತಕ ತೆಗೆದುಕೊಂಡು ಬನ್ನಿ ಬಾಡಿಗೆ ಕಟ್ಟುತ್ತೇವೆಂದು ೋನ್​ ಮಾಡಿದ್ದೇವೆ. ಆದರೆ ಇಷ್ಟು ವರ್ಷಗಳ ಕಾಲ ಬಂದು ಬಾಡಿಗೆ ಕಟ್ಟಿಸಿಕೊಳ್ಳದೆ ಈಗ ಏಕಾಏಕಿ ಬೀಗ ಹಿಡಿದುಕೊಂಡು ಬಂದು ನಮ್ಮನ್ನು ಅವಮಾನಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಮುಖ್ಯಾಧಿಕಾರಿ ನಾಗಭೂಷಣ್​ ಅವರು ನಾನೇ ಖುದ್ದು ಬಂದಿದ್ದರೂ ಬಾಡಿಗೆ ಕಟ್ಟಿಲ್ಲ. ಹಾಗಾಗಿ ಕಟ್ಟುನಿಟ್ಟಾಗಿ ವಸೂಲಿಗೆ ಬಂದಿದ್ದೇವೆ. ಪಂಚಾಯಿತಿಯಲ್ಲಿ ಸಿಬ್ಬಂದಿ ಸಮಸ್ಯೆ ಇರುವುದರಿಂದ ಎಂಟ್ರಿಯಲ್ಲಿ ತೊಂದರೆಯಾಗಿದೆ. ನಿಮ್ಮಲ್ಲಿ ಇರುವ ರಸೀದಿ ತೋರಿಸಿ ಬಾಕಿಯಲ್ಲಿ ಅದನ್ನು ಜಮೆ ಮಾಡಿ ಉಳಿದ ಬಾಕಿ ಹಣ ಪಾವತಿಸಿ ಎಂದರು. ಕೆಲವರ ಬಳಿ ರಸೀದಿ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವರ ರಸೀದಿ ಆಡಿಟ್​ಗೆ ಬಂದಿದ್ದಾರೆಂದು ಬಿಲ್​ ಕಲೆಕ್ಟರ್​ ರಾಜಣ್ಣ ಕಲೆಕ್ಟ್​ ಮಾಡಿಕೊಂಡು ಹೋಗಿದ್ದಾರೆ. ಹೋದವರು ಜಮೆ ಮಾಡದೆ ರ್ನಿಲಕ್ಷಿಸಿದ್ದಾರೆ. ಹಾಗಾಗಿ ಬ್ಯಾಂಕ್​ ಸ್ಟೇಟ್​ಮೆಂಟ್​ ತೆಗೆಸಿ ಅದರಲ್ಲಿ ಪಾವತಿಯಾಗಿರುವಂತೆ ಬಾಡಿಗೆ ಜಮೆಮಾಡಿಕೊಂಡು ಉಳಿದ ಬಾಕಿ ತಿಳಿಸಿದರೆ ಕಟ್ಟುತ್ತೇವೆ ಎಂದರು. ಕೆಲವರು ಬಾಡಿಗೆ ಕಟ್ಟಲು ಕಾಲವಕಾಶ ಕೇಳಿದರು.ಕೆಲವರು ಸ್ಥಳದಲ್ಲೇ ಚೆಕ್​ ಬರೆದು ಬಾಡಿಗೆ ಕಟ್ಟಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net