ಮಳಿಗೆಗಳಿಗೆ ನುಗ್ಗಿದ ನೀರು

25 skpp 3
Published on

ಸಕಲೇಶಪುರ: ಪಟ್ಟಣದಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಮಧ್ಯಾಹ್ನ 2 ರಿಂದ 3ಗಂಟೆವರೆಗೆ ಬಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಪಟ್ಟಣದ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿದರೆ, ಪಟ್ಟಣದ ಆರ್‌ಬಿ ಸ್ಟೀಲ್ಸ್ ಸುತ್ತಮುತ್ತ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿ ಅವ್ಯವಸ್ಥೆ ಉಂಟುಮಾಡಿತು. ಸಂತೆ ವ್ಯಾಪಾರಿಗಳು ಮಳೆಯಿಂದಾಗಿ ಸಂಪೂರ್ಣ ಒದ್ದೆಯಾದರು. ತರಕಾರಿ ಖರೀದಿಗೆಂದು ಬಂದಿದ್ದ ಬಹುತೇಕ ಜನರು ಅಂಗಡಿ ಮುಂಗಟ್ಟಗಳ ಮುಂದೆ ಆಶ್ರಯ ಪಡೆದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net